ವಿರಾಜಪೇಟೆಯಲ್ಲಿ ರಾಮ್ಕೊ ಸಂಸ್ಥೆ ವತಿಯಿಂದ ಗುತ್ತಿಗೆದಾರರು ಮತ್ತು ಗ್ರಾಹಕರ ಸಮ್ಮಿಲನ ಕಾರ್ಯಕ್ರಮ

Feb 9, 2026 - 13:19
 0  272
ವಿರಾಜಪೇಟೆಯಲ್ಲಿ ರಾಮ್ಕೊ ಸಂಸ್ಥೆ ವತಿಯಿಂದ ಗುತ್ತಿಗೆದಾರರು ಮತ್ತು ಗ್ರಾಹಕರ ಸಮ್ಮಿಲನ ಕಾರ್ಯಕ್ರಮ

ವಿರಾಜಪೇಟೆ:ವಿರಾಜಪೇಟೆಯಲ್ಲಿ ರಾಮ್ಕೊ ಸಂಸ್ಥೆ ವತಿಯಿಂದ ಗುತ್ತಿಗೆದಾರರು ಮತ್ತು ಗ್ರಾಹಕರ ಸಮ್ಮಿಲನ ಕಾರ್ಯಕ್ರಮವು ವಿರಾಜಪೇಟೆಯ ಕದನೂರು ಗ್ರಾಮದ ಪ್ರಿಂಗ್ಸ್ ಫೀಲ್ಡ್ ರೆಸಾರ್ಟ್ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಹಲಾ ಸಂಸ್ಥೆಯ ಮಾಲೀಕರಾದ ಅಬ್ದುಲ್ಲಾ ಕಡಂಗ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಮ್ಕೋ ತಂಡದ ತಾಂತ್ರಿಕ ತಜ್ಞರಾದ ಸಂಪತ್, ರಂಜಿತ್, ಎಸ್‌ಎನ್‌ಎಸ್ ಟ್ರೇಡ್ ಮಾಲೀಕ ಕಡಂಗದ ಸಲಾಂ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಇದೇ ಸಂದರ್ಭ ಸಂಸ್ಥೆ ವತಿಯಿಂದ ಉಡುಗೊರೆಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಡಂಗ ಗ್ರಾಮದ ರಜಾಕ್, ಸುಬೈರ್, ರಾಜಿಕ್, ವಿರಾಜಪೇಟೆಯ ಶಭರೀಶ್ ಶೆಟ್ಟಿ, ಸುಬೈರ್, ಕಾಳಮಂಡ ಚೇತನ್, ಮುಕ್ಕಾಟಿರ ವರುಣ್, ಸೇರಿದಂತೆ ಗುತ್ತಿಗೆದಾರರು, ಗ್ರಾಹಕರು ಇನ್ನಿತರರು ಹಾಜರಿದ್ದರು. ವಿರಾಜಪೇಟೆ ನಗರ ಹಾಗೂ ಸುತ್ತಮುತ್ತಲಿನ ಕಟ್ಟಡದ ನಿರ್ಮಾಣದ ಗುತ್ತಿಗೆದಾರರು ರಾಮ್ಕೊ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0