ವಿಶ್ವವ್ಯಾಪಿ ಮಾನವೀಯ ಧಮ೯ ಸಂರಕ್ಷಣೆಯಲ್ಲಿ ರೆಡ್ ಕ್ರಾಸ್ ಮುಖ್ಯ ಪಾತ್ರ; ಬಿ. ಭಾಸ್ಕರರಾವ್

ವಿಶ್ವವ್ಯಾಪಿ ಮಾನವೀಯ ಧಮ೯ ಸಂರಕ್ಷಣೆಯಲ್ಲಿ ರೆಡ್ ಕ್ರಾಸ್ ಮುಖ್ಯ ಪಾತ್ರ; ಬಿ. ಭಾಸ್ಕರರಾವ್

ಮಡಿಕೇರಿ ಜ 25 - ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ಮಾನವೀಯ ಧಮ೯ವನ್ನು ಪ್ರಚುರಪಡಿಸುವ ಮೂಲಕ ವಿಶ್ವಶಾಂತಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಕ್ಷಾಂತರ ಮಂದಿಗೆ ರೆಡ್ ಕ್ರಾಸ್ ನೆರವನ್ನು ವಿಶ್ವವ್ಯಾಪಿ ಒದಗಿಸುತ್ತಾ ಬಂದಿದ್ದು ಕೊಡಗಿನಲ್ಲಿಯೂ ರೆಡ್ ಕ್ರಾಸ್ ಗೆ ಹೆಚ್ಚಿನ ಸದಸ್ಯರು ಸೇಪ೯ಡೆಯಾಗಬೇಕೆಂದು ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ. ಭಾಸ್ಕರರಾವ್ ಕರೆ ನೀಡಿದರು.

ನಗರದ ರೆಡ್ ಕ್ರಾಸ್ ಭವನಕ್ಕೆ ಭೇಟಿ ನೀಡಿದ ಭಾಸ್ಕರರಾವ್ ಈ ಸಂದಭ೯ ರೆಡ್ ಕ್ರಾಸ್ ಸದಸ್ಯರನ್ನುದ್ದೇಶಿಸಿ ಮಾತನಾಡಿ, ಯಾವುದೇ ದೇಶಗಳ ನಡುವೆ ಅಶಾಂತಿಯುತ ವಾತಾವರಣ ಪರಿಸ್ಥಿತಿ ಉಧ್ಬವಿಸಿದಾಗ ರೆಡ್ ಕ್ರಾಸ್ ಪ್ರಮುಖರು ಅಂಥ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಕ್ರಿಯರಾಗುತ್ತಾರೆ. ವಿಶ್ವದಲ್ಲಿ ಶಾಂತಿ ಕಾಪಾಡುವುದೇ ರೆಡ್ ಕ್ರಾಸ್ ನ ಪ್ರಮುಖ ಉದ್ದೇಶವಾಗಿದೆ ಎಂದರು.

 ಸಾಕಷ್ಟು ಅನುದಾನ ರೆಡ್ ಕ್ರಾಸ್ ನಲ್ಲಿ ಜನೋಪಯೋಗಿ ಕಾಯ೯ಗಳಿಗೆ ಲಭಿಸುತ್ತಿದ್ದು ಇದನ್ನು ಕೊಡಗಿನಲ್ಲಿ ಪ್ರಕೖತ್ತಿ ವಿಕೋಪದಂಥ ಪ್ರತಿಕೂಲ ದಿನಗಳಲ್ಲಿ ಸದುಪಯೋಗ ಮಾಡಬೇಕೆಂದೂ ಭಾಸ್ಕರ್ ರಾವ್ ಸಲಹೆ ನೀಡಿದರು. ಕೊಡಗಿನ ಸ್ಥಳೀಯ ಸಂಸ್ಥೆಗಳಿಂದ ರೆಡ್ ಕ್ರಾಸ್ ಗೆ ಲಭಿಸಬೇಕಾದ ವಾಷಿ೯ಕ ಚಂದಾ ಹಣವನ್ನು ವಿಳಂಭರಹಿತವಾಗಿ ಪಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದೂ ಅವರು ಸೂಚಿಸಿದರು. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸಂಚಾರ ಜಾಗೖತಿ ಶಿಬಿರಗಳ ಜತೆಗೇ ವಿನೂತನ ಯೋಜನೆಗಳನ್ನು ರೆಡ್ ಕ್ರಾಸ್ ಹಮ್ಮಿಕೊಳ್ಳಬೇಕು ಎಂದೂ ಭಾಸ್ಕರ್ ರಾವ್ ಸಲಹೆ ನೀಡಿದರು. ಕಾಲೇಜು ವಿದ್ಯಾಥಿ೯ಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಅಗತ್ಯ ಕಾಯ೯ಕ್ರಮಗಳನ್ನು ಆಯೋಜಿಸುವಂತೆ ಅವರು ಕೋರಿದರು. 

 ಕೊಡಗಿನಲ್ಲಿ ತಾವು ಪೊಲೀಸ್ ವರಿಷ್ಟಾಧಿಕಾರಿಯಾಗಿ ಕತ೯ವ್ಯ ಸಲ್ಲಿಸಿದ ದಿನಗಳು ತನ್ನ ಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದು ಹೆಮ್ಮೆಯಿಂದ ಹೇಳಿದ ಭಾಸ್ಕರರಾವ್, ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಸಂಚಾರ ನಿಯಂತ್ರಣ ಸಂಬಂಧಿತ ಈಗಲೇ ಎಚ್ಚೆತ್ತುಕೊಂಡು ಸೂಕ್ತ ಪರಿಹಾರೋಪಾಯ ಕಂಡುಹುಡುಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಚಾರ ಸಮಸ್ಯೆಯ ಜತೆಗೇ ಪ್ರವಾಸಿಗರೂ ಮಡಿಕೇರಿಯಿಂದ ದೂರವಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದೂ ಕಿವಿಮಾತು ಹೇಳಿದರು.

ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಬಿಂದುಮಣಿ ಮಾತನಾಡಿ, ಕೊಡಗಿನಲ್ಲಿ ಮಾದಕ ವ್ಯಸನಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದ್ದು ರೆಡ್ ಕ್ರಾಸ್ ಮೂಲಕ ಮಾದಕ ವ್ಯಸನಪೀಡಿತರನ್ನು ಚಟಮುಕ್ತ ಮಾಡುವಂಥ ಕಾಯ೯ಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.

ಕಳೆದ 20 ದಿನಗಳಿಂದ ಕೊಡಗಿನ ಪ್ರತೀ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಆಯಾ ಗ್ರಾಮ ವ್ಯಾಪ್ತಿಯಲ್ಲಿನ ಕಾನೂನು ಸಮಸ್ಯೆಗಳನ್ನು ತಳಿದುಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದೂ ಅವರು ನುಡಿದರು.

 ರೆಡ್ ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ರೆಡ್ ಕ್ರಾಸ್ ನಲ್ಲಿ 350 ಸದಸ್ಯರಿದ್ದು ಮುಂದಿನ ದಿನಗಳಲ್ಲಿ ಸೋಮವಾರಪೇಟೆ, ವೀರಾಜಪೇಟೆಯಲ್ಲಿಯೂ ಘಟಕ ಪ್ರಾರಂಭಿಸಿ ಸದಸ್ಯತ್ವವನ್ನು ಹೆಚ್ಚಿಸಲಾಗುತ್ತದೆ. ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನೂ ಶೀಘ್ರದಲ್ಲಿಯೇ ಆಯೋಜಿಸಲಾಗುತ್ತದೆ ಎಂದೂ ರವೀಂದ್ರ ರೈ ಮಾಹಿತಿ ನೀಡಿದರು.

ಮಳೆಗಾಲದಲ್ಲಿ ರೆಡ್ ಕ್ರಾಸ್ ಭವನದಲ್ಲಿ ಕಾಳಜಿ ಕೇಂದ್ರದ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿಮಾ೯ಣ ಕಾಯ೯ವನ್ನು ಈ ವಷ೯ದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದೂ ಅವರು ಹೇಳಿದರು. ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಹೆಚ್.ಟಿ, ನಿರೂಪಿಸಿದ ಕಾಯ೯ಕ್ರಮದಲ್ಲಿ ಖಜಾಂಜಿ ಪ್ರಸಾದ್ ಗೌಡ ವೇದಿಕೆಯಲ್ಲಿದ್ದರು. ರೆಡ್ ಕ್ರಾಸ್ ಪ್ರಮುಖರಾದ ಎಸ್. ಸಿ. ಸತೀಶ್, ಮಧುಕರ್, ಉತ್ತಯ್ಯ, ಸತೀಶ್ ರೈ, ವಿಜಯ್ ರೈ,, ವಸಂತ್,ಪ್ರಭಾಕರ್, ಲೋಕೇಶ್ ಹಾಜರಿದ್ದರು.