ಚೋಕಂಡಳ್ಳಿ-ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ಒದಗಿಸಲು ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ

Feb 25, 2026 - 20:22
 0  541
ಚೋಕಂಡಳ್ಳಿ-ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ಒದಗಿಸಲು ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ

ಸಿದ್ದಾಪುರ:ಇಲ್ಲಿನ ಎಸ್ ಎನ್ ಡಿ ಪಿ (ಶ್ರೀ ನಾರಾಯಣ ಗುರು ಪರಿಪಾಲನ ಯೋಗ) ಸಭಾಂಗಣದಲ್ಲಿ ನಡೆದ ಎಸ್.ಎನ್.ಡಿ ಪಿ ಮಹಿಳಾ ಸಂಘಟನೆಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಯದುವೀರ್ ಒಡೆಯರ್ ಅವರನ್ನು ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೋಕಂಡಳ್ಳಿ ಅವರ ನೇತೃತ್ವದಲ್ಲಿ ಭೇಟಿಯಾಗಿ ಚೋಕಂಡಳ್ಳಿ-ನಲ್ವತೋಕ್ಲು ಮೊಹಿದೀನ್ ಜುಮಾ ಮಸೀದಿಯ ಕಾಮಗಾರಿಗಳಿಗೆ ಸಂಸದರ ವಿಶೇಷ ನಿಧಿಯಿಂದ ಅನುದಾನವನ್ನು ನೀಡಲು ಮನವಿ ಪತ್ರವನ್ನು ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೋಕಂಡಳ್ಳಿ, ಕೊಡಗು ಜಿಲ್ಲಾ ಜೆಡಿಎಸ್ ಎಸ್ಸಿ- ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ ಜಯಮ್ಮ ಅಮ್ಮತಿ, ಮಡಿಕೇರಿ ತಾಲೂಕು ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಶ್ರಫ್ ಹಾಕತ್ತೂರು, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ.ಎಸ್. ನೆಲ್ಲಿಹುದಿಕೇರಿ, ವಿರಾಜಪೇಟೆ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ ಸೈಫುದ್ದೀನ್ ಜಾಮಿಯಾಲ, ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0