ಸೀಮಿತ ದಾಖಲೆಗಳ ಮೂಲಕ ಕೖಷಿಕರಿಗೆ ಕಂದಾಯ ಇಲಾಖೆ ಸಹಕಾರಿಯಾಗಬೇಕು ; ಸಿಪಿಎ ಕೋರಿಕೆ
ಮಡಿಕೇರಿ ಫೆ10- ಜಿಲ್ಲೆಯ ಕಂದಾಯ ಇಲಾಖೆಯಿಂದ ಕೖಷಿಕರಿಗೆ ಅನುಕೂಲಕರವಾಗಿ ಕಾಯ೯ಯೋಜನೆಗಳ ವಿಳಂಭರಹಿತ ಅನುಷ್ಠಾನಕ್ಕಾಗಿ , ಬಹಳ ಸೀಮಿತ ದಾಖಲೆಗಳು, ಕಾರ್ಯವಿಧಾನಗಳು ಮತ್ತು ವಿಳಂಬವಿಲ್ಲದೆ ನಿಯಮಗಳನ್ನು ರೂಪಿಸುವಂತೆ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಸರ್ಕಾರ ಮತ್ತು ಶಾಸಕರುಗಳನ್ನು ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಮತ್ತು ರಾಜ್ಯ ಶಾಸಕಾಂಗ ಸಭೆ ಡಿಸೆಂಬರ್ 2025 ರಲ್ಲಿ ಆರ್.ಟಿ.ಸಿ.ಯಲ್ಲಿ ಪಟ್ಟೇದಾರರ ಹೆಸರನ್ನು ಸರಳೀಕೃತ ರೀತಿಯಲ್ಲಿ ತೆಗೆದುಹಾಕಲು ಅಂಗೀಕರಿಸಿದ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಂದ ತಿದ್ದುಪಡಿಯನ್ನು ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಸ್ವಾಗತಿಸಿದೆ. ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿಧಾನಸಭಾ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಇವರುಗಳ ಮುತುವರ್ಜಿಯಿಂದ ಜಮ್ಮಾ ಬಾಣೆ ಕಾಯಿದೆಗೆ ತಿದ್ದು ಪಡಿಯನ್ನು ಯಶಸ್ವಿಯಾಗಿ ಮಾಡಿದ್ದಕ್ಕಾಗಿ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಧನ್ಯವಾದಗಳನ್ನು ಸಲ್ಲಿಸುವುದಾಗಿ ಸಿಪಿಎ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕೊಡಗು ಸೇವಾ ಕೇಂದ್ರವು ಕಳೆದ 6 ವರ್ಷಗಳಿಂದ ಈ ವಿಚಾರದ ಬಗ್ಗೆ ಕಾಯ೯ನಿವ೯ಹಿಸುತ್ತಿದ್ದು, . ಇದರಲ್ಲಿ 2011/12 ರಲ್ಲಿ ರಾಷ್ಟ್ರ ಪತಿಗಳ ಅನುಮೋದನೆ ಪಡೆದ ಕೊಡಗು ಜಿಲ್ಲೆಯ ಸಾಗು ಭಾಣೆ ಮತ್ತು ಜಮ್ಮಾ ಭಾಷೆ ಜಮೀನುಗಳ ಕಂದಾಯ ನಿಗದಿಯನ್ನು ಸರಳಗೊಳಿಸುವ ಬೇಡಿಕೆಯೂ ಸೇರಿದೆ.
ಸಾಗು ಭಾಷೆ ಮತ್ತು ಜಮ್ಮಾ ಭಾಷೆ ಜಾಗಗಳ ಕಂದಾಯ ನಿಗದಿ 2011-12ರ ತಿದ್ದುಪಡಿಯ ಈ ಕಾಯ್ದೆಗೆ ನಿಯಮಗಳನ್ನು ರೂಪಿಸದ ಕಾರಣ ಅಗತ್ಯವಿಲ್ಲದ ದಾಖಲೆಗಳನ್ನು ಅಧಿಕ್ಕಾರಿಗಳು ಅರ್ಜಿದಾರರಿಂದ ಅಗತ್ಯಪದಿಸುವುದರಿಂದ ಅನಗತ್ಯವಾಗಿ ಕಡತ ವಿಲೇವಾರಿ ವಿಳಂಬವಾಗುತ್ತಿದೆ. ಈ ಮೇಲಿನ ಕಾರಣಗಳಿಂದಾಗಿ ಕಂದಾಯ ನಿಗದಿ ಮೇಲಿನ ತಿದ್ದುಪಡಿ ಮತ್ತು ಪಟ್ಟೆದಾರರ ಹೆಸರು ವಜಾಮಾಡುವ ಕಾಯ್ದೆ ತಿದ್ದುಪಡಿಗೆ ಆದಷ್ಟು ಬೇಗ ನಿಯಮಗಳನ್ನು ರೂಪಿಸಿ ಜಿಲ್ಲಾ ಕಂದಾಯ ಇಲಾಖೆಗೆ ತಕ್ಷಣ ಜಾರಿಗೆ ತರಲು ನಿರ್ದೇಶನಗಳನ್ನು ನೀಡಬೇಕಾಗಿ ಸಿಪಿಎ ಕೋರಿದೆ.
ಈ ಮೇಲಿನ ಎರಡು ತಿದ್ದುಪಡಿಗಳನ್ನು ಕನಿಷ್ಠ ದಾಖಲೆಗಳೊಂದಿಗೆ ಜಾರಿಗೆ ತರಬೇಕು ವಿಭಾಗ ಪತ್ರ, ಪೌತಿಖಾತೆ, ಮರಣ ಪ್ರಮಾಣಪತ್ರ, ವಂಶಾವಳಿಪಟ್ಟಿ ಮತ್ತು ಪಟ್ಟೇದಾರರ ಕುಟುಂಬದ ಒಪ್ಪಿಗೆಯನ್ನು ಅಧಿಕಾರಿಗಳು ಅರ್ಜಿದಾರರಿಗೆ ಬಲವಂತಪಡಿಸಬಾರದು. ಎಂದೂ ಸಿಪಿಎ ಮೂಲಕ ರಾಜ್ಯ ಸಕಾ೯ರದ ಪ್ರಧಾನ ಕಾಯ೯ದಶಿ೯, ಕಂದಾಯ ಇಲಾಖೆಯ ಪ್ರಧಾನ ಕಾಯ೯ದಶಿ೯ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ . ಮನವಿ ಮಾಡಲಾಗಿದೆ ಎಂದೂ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. .