ರೋಟರಿ ದಿನಾಚರಣೆ - ಮಿಸ್ಟಿ ಹಿಲ್ಸ್ , ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ 22 ಫಲಾನುಭವಿಗಳಿಗೆ ಕೖತಕ ಕೈ, ಕಾಲು ಜೋಡಣೆ

ರೋಟರಿ ದಿನಾಚರಣೆ - ಮಿಸ್ಟಿ ಹಿಲ್ಸ್ , ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ  22 ಫಲಾನುಭವಿಗಳಿಗೆ ಕೖತಕ ಕೈ, ಕಾಲು ಜೋಡಣೆ

ಮಡಿಕೇರಿ ಫೆ. 23 - ಭಾರತದಲ್ಲಿ ಉತ್ತಮ ಉದ್ದೇಶಕ್ಕಾಗಿ ದಾನ ನೀಡುವವರ ಸಂಖ್ಯೆ ಕಡಮೆಯಾಗಿಲ್ಲ.. ಆದರೆ ಈ ರೀತಿ ನೀಡಿದ ದಾನ ಸೂಕ್ತವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವ ಕತ೯ವ್ಯ ದಾನ ಸ್ವೀಕರಿಸಿದವರ ಮೇಲಿದೆ ಎಂದು ಬೆಂಗಳೂರಿನ ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ಮಾಜಿ ಗವನ೯ರ್ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿಯ 121 ನೇ ದಿನಾಚರಣೆ ಸಂದಭ೯ದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಯುಕ್ತಾಶ್ರಯದಲ್ಲಿ 22 ಮಂದಿ ವಿಶೇಷ ಚೇತನರಿಗೆ ಕೖತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ನಾಗೇಂದ್ರ ಪ್ರಸಾದ್ ಮಾತನಾಡಿದರು.

ಭಾರತದಲ್ಲಿ ಕೊಡುಗೆ ದಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ಆದರೆ ದಾನಿಗಳು ತಾವು ಶ್ರಮಪಟ್ಟು ಗಳಿಸಿದ ಸಂಪಾದನೆಯನ್ನು ದಾನವಾಗಿ ನೀಡಿದ ಸಂದಭ೯ ಆ ಹಣ ಎಷ್ಟರ ಮಟ್ಟಿಗೆ ಉತ್ತಮ ಕಾಯ೯ಗಳಿಗೆ ವಿನಿಯೋಗಿಸಲ್ಪಡುತ್ತದೆ ಎಂಬುದನ್ನು ಗಮನಿಸುತ್ತಾರೆ. ಹೀಗಾಗಿ ಲಭಿಸಿದ ಕೊಡುಗೆಯನ್ನು ಸಮಪ೯ಕವಾಗಿ ಬಳಕೆ ಮಾಡುವುದು ದಾನ ಪಡೆದ ವ್ಯಕ್ತಿಗಳಿಂದ ಆಗಬೇಕಾಗಿದೆ ಎಂದರು. ಸಮಾಜದಲ್ಲಿ ಉತ್ತಮ ಕಾಯ೯ಗಳಿಗೆ ನೀಡಲ್ಪಡುವ ದಾನದಿಂದ ದಾನಿಗಳ ಮನಸ್ಸಿಗೂ ತೖಪ್ತಿ ದೊರಕುತ್ತದೆ. ಸಮಾಜದಿಂದ ಪಡೆದ ಆಸ್ತಿಯಲ್ಲಿ ಕೆಲವು ಪಾಲನ್ನಾದರೂ ಸಮಾಜಕ್ಕೆ ಮರಳಿ ನೀಡುವುದು ಪ್ರತೀಯೋವ೯ರ ಕತ೯ವ್ಯವಾಗಬೇಕೆಂದು ಅವರು ಹೇಳಿದರು.

ಪೀಣ್ಯ ರೋಟರಿ ಸಂಸ್ಥೆ ಮೂಲಕ 22 ವಷ೯ಗಳಿಂದ ಕೖತಕ ಕಾಲು , ಕೈ ಜೋಡಣಾ ಶಿಬಿರ ಆಯೋಜಿಸಲ್ಪಡುತ್ತಿದ್ದು, ಪ್ರತೀ ವಷ೯ 10 ದಿನ ಆಯೋಜಿತ ಶಿಬಿರದಲ್ಲಿ 1 ಕೋಟಿ ರು. ವೆಚ್ಚದಲ್ಲಿ 2,500 ಜನರಿಗೆ ಕೖತಕ ಕೈ, ಕಾಲು ಜೋಡಣೆ ಮಾಡಲಾಗುತ್ತಿದೆ ಎಂದೂ ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಅಪಘಾತದಲ್ಲಿ ಆಕಸ್ಮಿಕವಾಗಿ ಕೈ ಮತ್ತು ಕಾಲು ಕಳೆದುಕೊಂಡವರಿಗೆ ಕೖತಕ ರೀತಿಯಲ್ಲಿ ಕೈ ಕಾಲು ನೀಡುವಂಥ ಯೋಜನೆಗಳು ರೋಟರಿ ಸಂಸ್ಥೆಯಲ್ಲ ಪ್ರಮುಖವಾಗಿರಲಿ ಎಂದೂ ಅವರು ಕಿವಿ ಮಾತು ಹೇಳಿದರು.

ರೋಟರಿ ಜಿಲ್ಲೆ 3181 ನ ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿಯ ಈ ವಷ೯ದ ಧ್ಯೇಯವಾಕ್ಯವಾದ ಒಳಿತಿಗಾಗಿ ಒಂದಾಗೋಣ ಎಂಬಂತೆ ರೋಟರಿ ಸದಸ್ಯರೆಲ್ಲರೂ ಸಮಾಜಕ್ಕೆ ಒಳಿತುಂಟುಮಾಡುವ ಉದ್ದೇಶದಿಂದ ಒಂದಾಗಿ ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಸಕ್ರಿಯರಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖಾಧಿಕಾರಿ ವಿಮಲ ಮಾತನಾಡಿ, ಸಮಾಜದ ಜನತೆ, ದುಬ೯ಲರು, ಅಸಹಾಯಕರನ್ನು ಗುರುತಿಸಿ ಅವರ ಸೇವೆಗೆ ಮುಂದಾಗುವ ರೋಟರಿಯಂಥ ಸೇವಾ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದೆ ಎಂದರು. ಕೖತಕ ಕಾಲು, ಕೈ ಪಡೆದ ನಂತರ ಫಲಾನುಭವಿಗಳು ಹೊಸ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ ವಿಮಲ, ಅನೇಕರ ಪರಿಶ್ರಮದಿಂದಾಗಿ ತಾವು ಪಡೆದಿರುವ ಸಾಧನ ಸಲಕರಣೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಸ್ವಾಗತಿಸಿ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ವಂದಿಸಿದರು. ರೋಟರಿ ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ,ವಲಯ ಸೇನಾನಿ ಕಾಯ೯ಪ್ಪ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು, ಯೋಜನೆಯ ಸಂಚಾಲಕ ಡಾ.ಚೆರಿಯಮನೆ ಪ್ರಶಾಂತ್ ಕಾಯ೯ಕ್ರಮ ನಿರೂಪಿಸಿದರು.

 ಕೖತಕ ಕೈ, ಕಾಲ ಉತ್ಪಾದನೆಯ ಮೈಸೂರಿನ ಪುನಶ್ಚೇತನ ಸಂಸ್ಥೆಯ ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಶ್ರೀಹರಿ, ಅಂಬೆಕಲ್ ವಿನೋದ್, ಪ್ರಮೋದ್ ಕುಮಾರ್ ರೈ, ಪ್ರಸಾದ್ ಗೌಡ, ರತ್ನಾಕರ್ ರೈ, ಬಿ.ಕೆ. ಕಾಯ೯ಪ್ಪ, ಜಿ.ಆರ್. ರವಿಶಂಕರ್ ಅಶೋಕ್ ಪಿ.ವಿ. ಹಾಜರಿದ್ದರು.

 ಕಾಲು ಪಡೆದವರ ಭಾವನಾತ್ಮಕ ಮಾತುಗಳು

 ..... ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರುವ ಹಕ್ಕಿಗೆ ರೆಕ್ಕೆಯೊಂದು ಇಲ್ಲದೇ ಆದಾಗ ಅದು ಅನುಭವಿಸುವ ಯಾತನೆಯಂತೆ ನಾವೂ ಕೂಡ ಕಾಲು ಕಳೆದುಕೊಂಡು ಪಾಡು ಪಟ್ಟೆವು ಆದರೆ ಇದೀಗ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಕೖತಕ ಕಾಲು ದೊರಕಿದ್ದು ಹಕ್ಕಿಗೆ ಮತ್ತೆ ರೆಕ್ಕೆ ದೊರಕಿದಷ್ಟೇ ಸಂತೋಷವಾಗಿದೆ.

ಮನುಷ್ಯನಿಗೆ ಅಂಗಾಂಗ ಇಲ್ಲದೇ ಹೋದಾಗ ಆತನಿಗೆ ಆಗುವ ಸಂಕಟ ಅನುಭವಿಸಿದವರಿಗೆ ಗೊತ್ತು. ಕೖತಕ ಕಾಲು ನನ್ನ ಪಾಲಿಗೆ ಹೊಸ ಜೀವನವನ್ನೇ ತಂದುಕೊಟ್ಟಿದೆ ಎಂದು ಒಂದೂವರೆ ವಷ೯ಗಳ ಹಿಂದೆ ಮೈಸೂರಿನಲ್ಲಿ ರೈಲು ಹತ್ತುವ ಸಂದಭ೯ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಮಾಯಮುಡಿ ಗ್ರಾಮದ ಮೋಹನ್ ಕೖತಕ ಕಾಲು ಪಡೆದ ಬಳಿಕ ಅನುಭವವನ್ನು ಭಾವನಾತ್ಮಕವಾಗಿ ಹೇಳಿಕೊಂಡರು. ಚೆಟ್ಟಿಮಾನಿ ಗ್ರಾಮದ 76 ವಷ೯ದ ಮಾಜಿ ಸೈನಿಕ ಈಶ್ವರ ಮಾತನಾಡಿ, ನನಗೆ ಕಳೆದುಹೋಗಿದ್ದ ಎರಡನೇ ಕಾಲು ದೊರಕಿದ್ದು ಎರಡನೇ ಜೀವ ಪಡೆದಂತಾಗಿದೆ.

 ಕಾಲುಕಳೆದುಕೊಂಡ ಸಂದಭ೯ ನಮಗೆ ಯಾರೂ ಇಲ್ಲ ಎಂಬ ನೋವು ಇದ್ದ ಸಂದಭ೯ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯವರು ಕೖತಕ ಕಾಲಿನ ಮೂಲಕ ಮತ್ತೆ ಆತ್ಮಸ್ಥೆಯ೯ ತಂದಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು. ವಿವಿಧ ಕಾರಣಗಳು ಮುಖ್ಯವಾಗಿ ಅಪಘಾತಗಳಲ್ಲಿ ಕಾಲು ಕಳೆದುಕೊಂಡ 19 ಮಂದಿ ಮತ್ತು ಕೈ ಕಳೆದುಕೊಂಡ ಈವ೯ರು ಕೖತಕ ಕೈ, ಕಾಲು ಅಳವಡಿಸುತ್ತಿರುವಂತೆಯೇ ಭಾವುಕರಾದ ದೖಶ್ಯ ಸಮಾರಂಭದಲ್ಲಿ ಸೇರಿದ್ದವರ ಕಣ್ಮಾಲಿಗಳನ್ನೂ ತೇವಗೊಳಿಸಿತ್ತು.