ರೋಟರಿ ವುಡ್ಸ್ ನಿಂದ ವಿದ್ಯಾಥಿ೯ಗಳಿಗಾಗಿ ಕಲೆಯೊಂದಿಗೆ ಕಲಿಕೆ,ಕಾಯಾ೯ಗಾರ

ರೋಟರಿ ವುಡ್ಸ್ ನಿಂದ  ವಿದ್ಯಾಥಿ೯ಗಳಿಗಾಗಿ ಕಲೆಯೊಂದಿಗೆ ಕಲಿಕೆ,ಕಾಯಾ೯ಗಾರ

ಮಡಿಕೇರಿ,ಮಾಚ್೯ 3 ; ಕಲೆಯೊಂದಿಗೆ ಕಲಿಕೆ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಮಕ್ಕಳಿಗಾಗಿ ಮೂರ್ನಾಡು ಪ್ರೌಢ ಶಾಲೆ ಮತ್ತು ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಜಂಟಿಯಾಗಿ ಕಲೆಯ ಮೂಲಕ ಕಲಿಕೆ ಎನ್ನುವ ಕಾಯಾ೯ಗಾರವನ್ನು ಮೂನಾ೯ಡು ಪ್ರೌಡಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ಕುಶಾಲನಗರದ ನಿವೖತ್ತ ಚಿತ್ರಕಲಾ ಶಿಕ್ಷಕ ಯು. ಆರ್. ನಾಗೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣವಾಗಿದೆ .

ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳೊಡನೆ ಕೈಜೋಡಿಸುತ್ತಿರುವ ರೋಟರಿ ಮಡಿಕೇರಿ ವುಡ್ಸ್ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಎರಡು ಗಂಟೆಗಳ ಅವಧಿಯ ಈ ಕಾರ್ಯಾಗಾರದಲ್ಲಿ 8.9.10 ನೇ ತರಗತಿಯ 150 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ವನ್ನು ರೂಪಿಸುವಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ರೋಟರಿ ವುಡ್ಸ್ ವತಿಯಿಂದ ಹಲವಾರು ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದು ಇದರ ಸದುಪ ಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ರೋಟರಿ ವುಡ್ಸ್ ನ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಗೆ ಹೊಂದಿಕೊಳ್ಳುವುದರ ಮೂಲಕ, ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುವಂತಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಪ್ರಶಾಂತ್ ಎಸ್. ಡಿ ವಹಿಸಿದ್ದು, ವುಡ್ಸ್ ಸದಸ್ಯರಾದ ರೊ. ವಿನು ಚೇಂದ್ರಿ ಮಾಡ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸುಜಾತ ಸ್ವಾಗತಿಸಿ, ಶಿಕ್ಷಕರಾದ ಕೃಷ್ಣಪ್ಪ ವಂದಿಸಿದರು.