ವಿರೋಧ ಪಕ್ಷದ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮವಾಗಿ ಸ್ವೀಕರಿಸಲು ಮನೋಬಲ ಆಡಳಿತ ಪಕ್ಷದ ಶಾಸಕರಿಗೆ ಇರಬೇಕು; ನೆಲ್ಲೀರ ಚಾಲನ್
ಗೋಣಿಕೊಪ್ಪ : ವಿರೋಧ ಪಕ್ಷದ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮವಾಗಿ ಸ್ವೀಕರಿಸಲು ಮನೋಬಲ ಆಡಳಿತ ಪಕ್ಷದ ಶಾಸಕರಿಗೆ ಇರಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಾಲನ್ ಕಿವಿ ಮಾತು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸಬಾರದು ಎಂಬ ಧೋರಣೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಶಾಸಕರ ನಿಲುವನ್ನು ಖಂಡಿಸಿ ನೆಲ್ಲೀರ ಚಲನ್ ಈ ಹೇಳಿಕೆಯನ್ನು ನೀಡಿದ್ದಾರೆ.
ವಿರೋಧ ಪಕ್ಷ ತನ ನಿಲುವನ್ನ ವ್ಯಕ್ತಪಡಿಸಬಾರದು ಎಂಬ ಮನೋಭಾವವನ್ನು ಶಾಸಕರು ಹೊಂದಿರುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಟೀಕಿಸಿದ್ದಾರೆ. ವ್ಯವಸ್ಥೆಯು ಜನಪರವಾದ ನಿಲುವುಗಳನ್ನು ಹೊಂದದೇ ಇದ್ದಾಗ ಅದರ ವಿರುದ್ಧ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಾದ ನಡೆಯಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯರವರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ತಾವು ರಸ್ತೆಯಲ್ಲಿ ಕುಳಿತು ವಿಚಾರವನ್ನು ವಿರೋಧಿಸಿದ ಬಗ್ಗೆ ನೆನಪು ಮಾಡಿಕೊಳ್ಳಿ ಎಂದು ಜ್ಞಾಪಿಸಿದರು. ಸಾವಿನ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನದಿಂದ ಸಾರ್ವಜನಿಕರ ಪ್ರಾಣಹಾನಿಯಾದರೆ, ವಿರೋಧ ಪಕ್ಷವಾಗಿ ಬಿಜೆಪಿಗೆ ಶೋಭೆ ತರುದಿಲ್ಲ ಎಂಬ ಅರಿವು ನಮಗೆ ಇರುದರಿಂದ ನಾವು ಪ್ರತಿಭಟನೆ ಮಾಡುತ್ತಿರುವುದು ಎಂದರು. 2
5 ವರ್ಷ ಬಿಜೆಪಿ ಸರ್ಕಾರ ಇದ್ದಾಗ ಆನೆ ಮಾನವ ಸಂಘರ್ಷ ನಡೆದಿಲ್ವ ಎಂಬ ಪ್ರೆಶ್ನೆಗೆ ನಾವ್ಯಾರು ಇಲ್ಲ ಅಂದಿಲ್ಲ. ಆದರೆ ಕಳೆದ 25 ವರ್ಷದಲ್ಲಿ ಸಾವಿಗಿಂತ ಹೆಚ್ಚು ಈ ಮೂರು ವರ್ಷದಲ್ಲೇ ನಡೆದಿದೆ ಎಂಬುದನ್ನು ನಿಮ್ಮ ಬಳಿ ಇರುವ ದಾಖಲೆಯಿಂದ ತಿಳಿದುಕೊಳ್ಳಿ ಎಂದರು.
ಮಾಜಿ ಸ್ಪೀಕರ್ ರವರಿಂದ ಅನುದಾನ ಬಿಡುಗಡೆ ಬಗ್ಗೆ ಕೇಳಿದಿರಿ, ತಾವು ಒಮ್ಮೆ ಅರಣ್ಯ ಇಲಾಖೆಯಿಂದ ದಾಖಲಾತಿ ಪಡೆದುಕೊಳ್ಳಿ. ವಿರಾಜಪೇಟೆ ಕ್ಷೇತ್ರದಲ್ಲಿ ಆಗಿರುವ ರೈಲ್ವೆ ಬ್ಯಾರಿಕೆಡ್, ಕೆಲಸ ಎಲ್ಲವು ಯಾರ ಅವಧಿಯಲ್ಲಿ ಆಗಿರೋದು. ಅಷ್ಟೇ ಅಲ್ಲ 2023ರಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 150 ಕೋಟಿ ಅನುದಾನವನ್ನು ಸಹ ಕೆಜಿಬಿ ಅವಧಿಯಲ್ಲಿ ಆಗಿರೋದು. ಆದರೆ ಹಾಲಿ ಶಾಸಕನಾಗಿ 2023 ರ ಬಜೆಟ್ ನಲ್ಲಿ ಘೋಷಣೆ ಅದ ಅನುದಾನವನ್ನು ಅನುಷ್ಠಾನಗೊಳಿಸಲು ನಿಮಗೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಬಿ ಶೆಟ್ಟಿಗೇರಿಯಲ್ಲಿ ತಮ್ಮ ಅಮೃತ ಹಸ್ತದಲ್ಲಿ ರೈಲ್ವೆ ಬ್ಯಾರಿಕೆಡ್ ಮಾಡುತೇನೆಂದು ಗುದ್ದಲಿ ಪೂಜೆ ಮಾಡಿ ವರ್ಷವಾದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಕಾರಣ ತಿಳಿಸಿ ಎಂದು ಹೇಳಿದರು. ಮುಂದಿನ ದಿನದಲ್ಲಿ ಆನೆ ಮಾನವ ಸಂಘರ್ಷವನ್ನು ನಿಲ್ಲಿಸುವ ನಿಟ್ಟಿನಲ್ಲಿ ತಾವು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ಇದುವರೆಗೆ ಸಾಂಕೇತಿಕ ಹೋರಾಟ ಮಾಡಿದೆಯಷ್ಟೇ. ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ. ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
