SIR: ವಿಧಾನಸಭಾ ಕ್ಷೇತ್ರವಾರು ವಾರ್ ರೂಂ ಉಸ್ತುವಾರಿಗಳ ನೇಮಕ
admincoorgdaily

ಮಡಿಕೇರಿ:, ಎಸ್.ಐ.ಆರ್ ಪ್ರಕ್ರಿಯೆ ಪೂರ್ಣ ಪ್ರಮಾಣದ ಯಶಸ್ವಿಯ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ವಾರ್ ರೂಮ್ ಮೇಲುಸ್ತುವಾರಿ ಗಳನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 208 ಮಡಿಕೇರಿ ವಿಧಾನ ಸಭಾ ಕ್ಷೇತ್ರದ ವಾರ್ ರೂಮ್ ಮೇಲುಸ್ತುವಾರಿಯಾಗಿ ಜೆ.ಎಲ್ ಜನಾರ್ಧನ್ ಹಾಗೂ 209 ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಾರ್ ರೂಮ್ ಮೇಲುಸ್ತುವಾರಿ ಯಾಗಿ ಬೇಕಲ್ ರಮಾನಾಥ್ ನೇಮಕಗೊಂಡಿದ್ದಾರೆ.