ಕೊಡ್ಲಿಪೇಟೆಯಲ್ಲಿ SYS ರಾಷ್ಟ್ರರಕ್ಷಾ ಸಂಗಮ: ದೇಶದ ವಿಷಯದಲ್ಲಿ ಎಲ್ಲರೂ ಒಂದಾಗಿರಬೇಕು:ಕಿರಿಕೊಡ್ಲಿ ಸ್ವಾಮೀಜಿ
ಕೊಡ್ಲಿಪೇಟೆ : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೊಡಗು ಜಿಲ್ಲಾ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಸಮೀಪದ ನೂರ್ ಮಹಲ್ ನಲ್ಲಿ ಹಮ್ಮಿಕೊಂಡಿದ್ದಂತಹ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಕಿರಿಕೊಡ್ಲಿ ಮಠಾದೀಶರಾದ ಶ್ರೀ ಸದಾಶೀವ ಸ್ವಾಮೀಜಿಗಳು ದೇಶ ,ರಾಷ್ಟ್ರ ಎಂದು ಬಂದಾಗ ಎಲ್ಲರೂ ಒಂದಾಗಿ ,ಒಗ್ಗಾಟ್ಟಾಗಿರಬೇಕು ಎಂದು ಕರೆ ನೀಡಿದರು.
ಧರ್ಮದ ಆಚರಣೆಗಳು ನಮ್ಮಗಳ ದೇವಸ್ಥಾನ ,ಮಸೀದಿ ,ಚರ್ಚ್ ಗಳಲ್ಲಿ ವೈಯುಕ್ತಿವಾಗಿ ಆಚರಣೆ ಮಾಡುತ್ತಿದ್ದೇವೆ.ಅಲ್ಲಿಂದ ಹೊರಗೆ ಬಂದ ತಕ್ಷಣ ನಾವೆಲ್ಲರು ಭಾರತೀಯರು ಎಂಬ ಭಾವನೆ ಮೂಡಬೇಡಕು. ಹಿಂದೆ ಯಾವುದೇ ವಿಶ್ವವಿದ್ಯಾಲಯ ಇರಲಿಲ್ಲ.ಸರಿಯಾದ ಶಿಕ್ಷಣದ ವ್ಯವಸ್ಥೆ ಇರಲಿಲ್ಲ.ಗುರುಕುಲದಂತಹ ಪದ್ಧತಿಯಲ್ಲಿ ವಿದ್ಯೆಗಳಿಸಿದ್ದರು. ಅವರೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಬರುತ್ತಿದ್ದರು. ಆದರೆ ನಾವೆಲ್ಲರೂ ಕೂಡ ಸ್ವಾತಂತ್ರ್ಯ ನಂತರ ಡಾಕ್ಟರೇಟ್ ಪಡೆದುಕೊಂಡು ,ವಿಜ್ಞಾನ ಅದ್ಯಯನ ಹಾಗೂ ಇಂಜಿನಿಯರ್ ಹಾಗೂ ವೈದ್ಯಉನ್ನತ ಪದವಿ ಪಡೆದುಕೊಳ್ಳುತ್ತಿದ್ದೇವೆ.ಅದು ಪದವಿಗಳಿಗೆ ಮಾತ್ರ ಸೀಮಿತವಾಗುತ್ತಿದೆ. ವೈಯುಕ್ತಿಕವಾದ ಜೀವನ ದ್ವೇಷದಿಂದ ಕೂಡಿರುವಂತಿದೆ ಎಂದು ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
ಕೊಡ್ಲಿಪೇಟೆ ಐಪಿಸಿ ಚರ್ಚ್ ನ ಫಾಸ್ಟರ್ ಫ್ರೆಡ್ಡಿ ರವರು ಮಾತನಾಡಿ ಸ್ವಾತಂತ್ರ್ಯ ದಿನವನ್ನು ಹಬ್ಬವಾಗಿ ಆಚರಿಸುತ್ತಿದ್ದೇವೆ. ಒಂದು ಹಂತ ಹಿಂದೆ ಹೋದರೆ ಇದು ಭಾರತ ದೇಶದ ಪುನರ್ಜನ್ಮ ಅಂತಾ ಹೇಳಬಹುದು.ದೇಶದ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ಬ್ರಿಟಿಷ್ ವಶಾಹತು ಶಾಹಿಗಳ ಕರಾಳ ಹಸ್ತದಿಂದ ಮುಕ್ತಿ ದೊರಕಿದೆ. ಸಂವಿಧಾನ ಕೊಟ್ಟಿರುವಂತಹ ಮೂಲಭೂತ ಹಕ್ಕುಗಳನ್ನು ಅನೇಕ ರೀತಿಯಲ್ಲಿ ಕಸಿಯಲ್ಪಡುತ್ತಿರುವುದು ಖೇದಕರ.ಬ್ರೀಟಿಷರು ಯಾವ ರೀತಿಯಲ್ಲಿ ಗುಲಾಮರನ್ನಾಗಿ ಮಾಡಿದ್ದರೋ ಅದೇ ರೀತಿಯಲ್ಲಿ ಇಂದಿನ ವ್ಯವಸ್ಥೆ ಕೂಡ ಕಂಡು ಬರುತ್ತಿದೆ.ಎಲ್ಲಾ ರೀತಿಯ ಸ್ವಾತಂತ್ರ್ಯ ವನ್ನು ಇಲ್ಲದಂತೆ ಮಾಡುವುದು ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಬಾಷಣ ಮಾಡಿದ ಉಪನ್ಯಾಸಕ ಝಹೀರ್ ನಿಝಾಮಿ, 79 ವರ್ಷಗಳ ಭಾರತವನ್ನು ಅವಲೋಕಿಸಿದರೆ ದೇಶಕ್ಕೆ ಕೊಟ್ಟಿರುವಂತಹ ಸಂವಿಧಾನದಲ್ಲಿರುವ "ಜಾತ್ಯಾತೀತತೆ" ಎಂಬ ತತ್ವ ಅತ್ಯಮೂಲ್ಯವಾದಂತದ್ದು , ಇದರ ಮೂಲ ಉದ್ದೇಶ ಎಲ್ಲಾ ಧರ್ಮದವರು ಸಮಾನವಾಗಿ ಬಾಳಬೇಕು ಎಂಬ ಮಹತ್ತರವಾದ ಸಂದೇಶ ಇದರಲ್ಲಿ ಅಡಗಿದೆ.ಆದರೆ ಈಗ ಧರ್ಮಗಳು ನಮ್ಮನ್ನು ಬೇರ್ಪಡಿಸುವಂತೆ ಗೋಡೆಗಳು ನಿರ್ಮಾಣ ಮಾಡುತ್ತಿದೆ ಎಂದರು.
ಜಿಲ್ಲಾ ಖಾಝಿಗಳಾದ ಅಬ್ದುಲ್ಲಾ ಫೈಝಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ,ಸ್ವಾತಂತ್ರ್ಯ ದಿನದ ಮಹತ್ವದ ಕರಿತು ಮಾತನಾಡಿದರು. ಕೊಡ್ಲಿಪೇಟೆ ಹನಫಿ ಜಾಮೀಯಾ ಮಸೀದಿಯ ಧರ್ಮಗುರುಗಳಾದ ನಾದೀರ್ ರಝಾ, ಜಿಲ್ಲಾ ದಲಿತ ಮುಖಂಡರಾದ ಜೆ.ಆರ್.ಪಾಲಕ್ಷ ,ವೀರಶೈವ ಯುವ ಮುಖಂಡರಾದ ಬಿ.ಕೆ.ಯತೀಶ್ ,ತಾಲೂಕು ಕೆ.ಡಿ.ಪಿ.ಸದಸ್ಯರುಗಳಾದ ಔರಂಗಜೇಬ್ ಮತ್ತು ಡಿ.ಆರ್.ವೇದಕುಮಾರ್ ,ಎಸ್ಕೆಎಸ್ಸೆಎಸ್ಸೆಎಫ್ ರಾಜ್ಯ ಸಮಿತಿ ಸದಸ್ಯ ತಮ್ಲೀಕ್ ದಾರಿಮಿ ,ಕೆಪಿಸಿಸಿ ಸದಸ್ಯ ಯಾಕೂಬ್ ಬಜೆಗುಂಡಿ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.
ಎಸ್‌ವೈಎಸ್ ಜಿಲ್ಲಾದ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿ ಸ್ವಾಗತ ಕೋರಿದರು. ಮಸ್ಜಿದುನ್ನೂರ್ ಕಾರ್ಯದರ್ಶಿ ಹನೀಫ್ ವಂದಿಸಿ, ಮಹಮ್ಮದ್ ಇರ್ಫಾನ್ ನಿರೂಪಿಸಿದರು.