ಸಕಲೇಶಪುರ; ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್ಸ್ ಮೇಲೆ ಯುವಕರಿಂದ ಹಲ್ಲೆ

Mar 28, 2026 - 22:25
 0  895
ಸಕಲೇಶಪುರ; ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್ಸ್ ಮೇಲೆ ಯುವಕರಿಂದ ಹಲ್ಲೆ
ಹಲ್ಲೆ

ಹಾಸನ: ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಛಾಯಾಗ್ರಾಹಕರ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

 ಈ ಸಂಬಂಧ ಮೂಡಿಗೆರೆ ತಾಲೂಕಿನ ಅಭಿ, ಪ್ರಶಾಂತ್, ರಕ್ಷ, ಅರವಿಂದ್, ಉಚಿತ್, ಪ್ರಜ್ವಲ್, ನಿಶಾಂತ್ ಎಂಬುವರ ಮೇಲೆ ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?: ಛಾಯಾಗ್ರಾಹಕರು ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಾಹ ಪೂರ್ವ ಫೋಟೋಶೂಟ್ ನಡೆಸುತ್ತಿದ್ದಾಗ ಸ್ಥಳೀಯ ಯುವಕರ ಗುಂಪು ಅವರ ಉಪಸ್ಥಿತಿಯನ್ನು ಪ್ರಶ್ನಿಸಿ, ನೀವು ಇಲ್ಲಿ ಏಕೆ ಚಿತ್ರೀಕರಣ ಮಾಡುತ್ತಿದ್ದೀರಿ ಮತ್ತು ನಿಮಗೆ ಅನುಮತಿ ಇದೆಯೇ ಎಂದು ಕೇಳಿದ್ದಾರೆ.

ಇದಕ್ಕೆ ಛಾಯಾಗ್ರಾಹಕರು ತಾವು ಪ್ರವಾಸಿಗರು ಮತ್ತು ಛಾಯಾಗ್ರಹಣಕ್ಕೆ ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಬಳಿಕ ಮಾತಿನ ಚಕಮಕಿ ನಡೆದು ಯುವಕರ ಗುಂಪು, ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ಪ್ರಶ್ನಿಸಿದವರ ಮೇಲೂ ಗುಂಪು ಹಲ್ಲೆ ಮಾಡಿ, ಉಪಕರಣಗಳಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ.

 ಘಟನೆಯಿಂದ ದೇವಾಲಯದಲ್ಲಿದ್ದ ಪ್ರವಾಸಿಗರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆಯು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಯುವಕರ ದುಷ್ಕೃತ್ಯವನ್ನು ಖಂಡಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0