Kodagu

ಟೇಬಲ್ ಟೆನ್ನಿಸ್ ನಲ್ಲಿ ಸರ್ವದೈವತ ಪ್ರೌಢಶಾಲಾ ಬಾಲಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

admincoorgdaily

ಕುಶಾಲನಗರ: ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ವಿರಾಜಪೇಟೆ ತಾಲೂಕನ್ನು ಪ್ರತಿನಿಧಿಸಿದ್ದ ಸರ್ವದೈವತಾ ಪ್ರೌಢಶಾಲೆಯ ಬಾಲಕರ ತಂಡ ಜಯಗಳಿಸಿ ಲಿತೇಶ್ ಮತ್ತು ಸಫ್ವಾನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದ್ದು ದೃತಿ ಮತ್ತು ಅನ್ಹಾ ಫಾತಿಮಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತರಬೇತುದಾರರಾದ ಪ್ರಮೋದ್ ಗೌಡ ತಿಳಿಸಿದ್ದಾರೆ.