ಶನಿವಾರಸಂತೆ: ಆಲೂರು ಸಿದ್ದಾಪುರ ವಲಯ ಕಾಂಗ್ರೆಸ್ ಸಭೆ
admincoorgdaily

ಶನಿವಾರಸಂತೆ:ಆಲೂರು ಸಿದ್ದಾಪುರ ಕಾಂಗ್ರೆಸ್ ವಲಯ ಅಧ್ಯಕ್ಷರ ಹಾಗೂ ಸದಸ್ಯರ ಸಭೆ ಮಾಲಂಬಿಯಲ್ಲಿ ಆಲೂರು ಸಿದ್ದಾಪುರ ವಲಯ ಅಧ್ಯಕ್ಷ ಎಂ. ವಿ ಅಶೋಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಪಾಲ್ಗೊಂಡ ಮಾತನಾಡಿದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಪಕ್ಷ ಸಂಘಟನೆ ಒಂದೇ ನಮ್ಮ ಗುರಿ ಆಗಬೇಕು.ಮುಂದೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಬರಲಿದ್ದು ಎಲ್ಲರೂ ಕ್ರಿಯಾಶೀಲರಾಗಬೇಕು, ಈಗಾಗಲೇ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಹಾಗೂ ಕ್ರಿಯಾ ಶೀಲಾ ಪಾದರಸದಂತೆ ಚುರುಕುತನಡ ಶಾಸಕರಾದ ಮಂತರ್ ಗೌಡ ರವರು ನಮಗೆ ಸಿಕ್ಕಿದ್ದಾರೆ ಈ ಭಾಗದ ಅಭಿವೃದ್ಧಿಯನ್ನು ಜನರಿಗೆ ಪ್ರಚಾರ ಮಾಡಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಯಾವುದೇ ಮನಸ್ತಾಪ ಮಾಡಿಕೊಳ್ಳದೆ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸ ಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಾರೆನ್ಸ್ ಮಾತನಾಡಿ ನಮ್ಮ ಯೋಜನೆಗಳನ್ನು ಮನೆ ಮನೆಗೆ ಪ್ರಚಾರ ಮಾಡಬೇಕು, ಯಾವುದೇ ಅನುಮಾನ ಬೇಡ ಈಗಾಗಲೇ ಎಲ್ಲಾ ಉಚಿತ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುತ್ತಿದೆ ಅದಕ್ಕಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಆಗಿದ್ದು ವಿರೋಧಿಗಳಿಗೆ ನಮ್ಮ ತಪ್ಪು ಯಾವುದು ಸಿಗುತ್ತಿಲ್ಲ, ಮುಂದೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ನಮ್ಮ ಕೈ ಸೇರಬೇಕು ಆ ರೀತಿಯಲ್ಲಿ ಕಾರ್ಯರಂಭ ಮಾಡಬೇಕು ಎಂದರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಮಾತನಾಡಿ ಯುವಕರು ಹೆಚ್ಚು ಹೆಚ್ಚು ಚುರುಕಾಗಬೇಕು ನಮಗೆ ಕೊಟ್ಟ ಸ್ಥಾನ ಮನಗಳನ್ನು ದುರುಪಯೋಗ ಪಡುಸಿಕೊಳ್ಳಬಾರದು ಮುಂದೆ ಒಂದು ಉತ್ತಮ ಯುವ ತಂಡ ಕಾಂಗ್ರೆಸ್ ನಲ್ಲಿ ರಚನೆ ಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ರಾಜಮ್ಮ ರುದ್ರಯ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಜನಾರ್ಧನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್, ಪ್ರಚಾರ ಸಮಿತಿ ಸದಸ್ಯ ವಿನೋದ್, ಪ್ರಮುಖರಾದ ಹೆಚ್. ಟಿ. ಕೋಮರಪ್ಪ, ಲೀಲಾದಾಸ್, ಗಣೇಶ್, ಸುಮೇಶ್, ಕಣಿವೆ ಬಸವನಹಳ್ಳಿ .ಎನ್. ದಿನೇಶ್, ಸ್ವಾಮಿ ಗೌಡ, ವೆಂಕಟೇಶ್ ಎಂ. ಈ. ರಮೇಶ್, ಗಿರೀಶ್,ಮುಂತಾದವರಿದ್ದರು.