Kodagu

ಆಗಸ್ಟ್ 26 ರಿಂದ ಸೆ.6 ರವರೆಗೆ ಜಿಲ್ಲೆಯ ವಿವಿಧೆಡೆ ಸೀರತ್ ಅಭಿಯಾನ

admincoorgdaily

ಆಗಸ್ಟ್ 26 ರಿಂದ ಸೆ.6 ರವರೆಗೆ ಜಿಲ್ಲೆಯ ವಿವಿಧೆಡೆ ಸೀರತ್ ಅಭಿಯಾನ

ಮಡಿಕೇರಿ: ಜಮಾಅತೆ ಇಸ್ಲಾಮಿ ಹಿಂದ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಜನ್ಮ ದಿನದ ಪ್ರಯುಕ್ತ ಆ.26 ರಿಂದ ಸೆ.6 ರವರೆಗೆ ಜಿಲ್ಲೆಯ ವಿವಿಧೆಡೆ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಜಿ.ಎಚ್.ಮೊಹಮ್ಮದ್ ಹನೀಫ್ ತಿಳಿಸಿದ್ದಾರೆ.

ಪ್ರವಾದಿಯವರ ಕ್ರಾಂತಿ ಸತ್ಯ, ನ್ಯಾಯ, ಕರುಣೆ, ಸಮಾನತೆ, ಘನತೆಯ ಮೇಲೆ ಸ್ಥಾಪಿತವಾಗಿದೆ. ಈ ಸಂದೇಶಗಳನ್ನು ಜನತೆಗೆ ಪರಿಚಯಿಸಿ ತಪ್ಪು ಕಲ್ಪನೆ ಹೋಗಲಾಡಿಸುವುದು ಅಭಿಯಾನದ ಉದ್ದೇಶ. ಅಭಿಯಾನದಲ್ಲಿ ಸೀರತ್ ವಿಚಾರಗೋಷ್ಠಿ, ಜುಮಾ ಪ್ರವಚನ, ಪುಸ್ತಕ ಬಿಡುಗಡೆ, ಆಸ್ಪತ್ರೆ, ವೃದ್ಧಾಶ್ರಮ ಭೇಟಿ, ಸೌಹಾರ್ದ ರ‌್ಯಾಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಖರಮತ್ ಉಲ್ಲಾ ಖಾನ್, ಮಹಮ್ಮದ್ ಮುಸ್ತಫಾ, ರಮೀಜ್ ಅಹ್ಮದ್, ಅಬ್ದುಲ್ ಖಾದರ್ ಮತ್ತಿತರರು ಇದ್ದರು.