Kodagu

ಶನಿವಾರಸಂತೆ: ನಿಸರ್ಗ ಸಿರಿ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಪ್ರದರ್ಶನ

admincoorgdaily

ಶನಿವಾರಸಂತೆ :ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ ಶನಿವಾರ ಸಂತೆ ಇಲ್ಲಿನ ನಿಸರ್ಗ ಸಿರಿ ಇಕೋ ಕ್ಲಬ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ರಚಿಸಿ ಪ್ರದರ್ಶಿಸಿದರು. ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಸವಿತಾ ರವರು ಮಣ್ಣಿನ ಗಣಪತಿಗಳಿಂದ ಆಗುವ ಅನುಕೂಲ, ಪ್ಲಾಸ್ಟ ಆಫ್ ಪ್ಯಾರಿಸ್ ಮತ್ತು ಬಣ್ಣ ಗಳ ಗಣಪತಿಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಕ್ಷಕರಾದ ಕೆ.ಪಿ ಜಯಕುಮಾರ್ ರವರು ಮಾತನಾಡಿ ಇತ್ತೀಚಿನ ಧಾರ್ಮಿಕ ಹಬ್ಬ ಹರಿದಿನಗಳು ಪರಿಸರಕ್ಕೆ ಮಾರಕವಾದ ರೀತಿಯಲ್ಲಿ ಆಚರಿಸಲ್ಪಡುತ್ತಿರುವುದು ದುರಾದೃಷ್ಟಕರ, ಪಟಾಕಿ ಸಿಡಿಸುವುದು ಡಿಜೆ ಸೌಂಡ್ ಗಳನ್ನು, ಹಾಕುವುದು, ಧಾರ್ಮಿಕ ಪದ್ಧತಿಯ ಆಚರಣೆಗಳಿಗಿಂತ ಮನರಂಜನೆಗೆ ಆದ್ಯತೆ ನೀಡುತ್ತಿರುವುದು ವಿಷಾದಕರ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿವಪ್ರಕಾಶ್, ಉಪನ್ಯಾಸಕಾರದ ಮೊಹಮ್ಮದ್ ಜಹೀರ್, ಸರ್ಫಾರಾಜ್ಅಹಮದ್, ಭವ್ಯ, ನಿತ್ಯ, ಶಿಕ್ಷಕರಾದ ಸುಚಿತ್ರಾ ಅವರು ಹಾಜರಿದ್ದು, ಮಕ್ಕಳ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.