ಶನಿವಾರಸಂತೆ: ಕೊಲೆ ಪ್ರಕರಣ, ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
admincoorgdaily


ಶನಿವಾರಸಂತೆ;,ಸಕಲೇಶಪುರ ತಾಲೂಕಿನ ಬಾಳೆಕೆರೆ ನಿವಾಸಿಯಾದ ಪುನೀತ್ ದಿನಾಂಕ: 29-03-2026 ರಂದು ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಕುರಿತು ದೂರು ಸ್ವೀಕರಿಸಿದ್ದು, ಕಾಣೆಯಾದ ವ್ಯಕ್ತಿಯ ಪತ್ತೆ ಕುರಿತು ತನಿಖೆ ಕೈಗೊಳ್ಳುವ ಸಂದರ್ಭ ಸದರಿ ವ್ಯಕ್ತಿ ಪುನೀತ್‌ನನ್ನು ಕೊಲೆ ಮಾಡಿರುವುದು ತಿಳಿದುಬಂದಿರುತ್ತದೆ.
ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಲಂ: 103, 238, 3(5) ಬಿಎನ್‌ಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಎಸ್.ಪಿ. ಬಿಂದು ಮಣಿ.ಆರ್.ಎನ್, ಚಂದ್ರಶೇಖರ್.ಪಿ, ಡಿಎಸ್‌ಪಿ, ಸೋಮವಾರಪೇಟೆ ಉಪವಿಭಾಗ, ಶ್ರೀ ಕೃಷ್ಣರಾಜು, ಪಿಐ, ಶನಿವಾರಂತೆ ಪೊಲೀಸ್ ಠಾಣೆ, ಶ್ರೀ ಗೋವಿಂದರಾಜು, ಪಿಎಸ್‌ಐ & ಶ್ರೀ ಚಂದ್ರು, ಶನಿವಾರಸಂತೆ ಪೊ.ಠಾ & ಠಾಣಾ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿದ್ದು,
ಸದರಿ ಪ್ರಕರಣದ ಆರೋಪಿಗಳಾದ ರತ್ನ, 30 ವರ್ಷ, ಬಾಳೆಕೆರೆ ಗ್ರಾಮ, ಪ್ರವೀಣ್, 35 ವರ್ಷ, ಮತ್ತು ಪಾರ್ವತಮ್ಮ, 58 ವರ್ಷ, ಹೆಮ್ಮನೆ ಗ್ರಾಮ ಎಂಬುವವರನ್ನು ತನಿಖಾ ತಂಡವು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕು| ಬಿಂದು ಮಣಿ ಆರ್.ಎನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.