ಸಹಕಾರಿ ಸಂಘಗಳ ಅಭಿವೃದ್ಧಿಗೆ ಷೇರುದಾರರು ಭದ್ರ ಬುನಾದಿ: ರೀನಾ ಪ್ರಕಾಶ್

ಸಹಕಾರಿ ಸಂಘಗಳ ಅಭಿವೃದ್ಧಿಗೆ ಷೇರುದಾರರು ಭದ್ರ ಬುನಾದಿ:  ರೀನಾ ಪ್ರಕಾಶ್

ವಿರಾಜಪೇಟೆ: ಸಂಘಗಳ ಉನ್ನತ್ತಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿಡಲು ಸದಸ್ಯರು ಸಹಕಾರ ನೀಡಬೇಕು ಎಂದು ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಅವರು ಮಹಾಸಭೆಯಲ್ಲಿ ಹೇಳಿದರು.

ನಂ 570 ನೇ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಗಾಂಧಿನಗರ ವಿರಾಜಪೇಟೆ ಇವರ ಪ್ರಥಮ ಮತ್ತು 2024-25 ನೇ ಸಾಲಿನ ಮಹಾಸಭೆಯು ಗಾಂಧಿನಗರ ಲಯನ್ಸ್ ಕ್ಲಬ್ ನ ಸಭಾಂಗಣದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭಿಸಿದ ಮಾಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರೀನಾ ಪ್ರಕಾಶ್ ಅವರು,

ಸಂಘ 02-01-2025 ರಲ್ಲಿ ಸ್ಥಾಪನೆಗೊಂಡು 385 ಮಂದಿ ಸದಸ್ಯ ಬಲದೊಂದಿಗೆ ಮುನ್ನಡೆಯುತ್ತಿದೆ. ಲಕ್ಷದ ವರೆಗಿನ ಸಾಲಗಳು ಇದೀಗ ಸದಸ್ಯರಿಗೆ ನೀಡಲಾಗಿದ್ದು ಸಕಾಲದಲ್ಲಿ ಸದಸ್ಯರು ಸಾಲದ ಕಂತುಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುತಿದ್ದಾರೆ. ಮುಂದೆ ಠೇವಣಿ ಖಾತೆಯ ಸಾಲ, ಪಿಗ್ಮಿ ಖಾತೆ ಮತ್ತು ಸಾಲ, ಎಸ್.ಬಿ. ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಲಾಗುತ್ತದೆ.

 ಬ್ಯಾಂಕ್ ಸದೃಢವಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಲವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಆಡಳಿತ ಮಂಡಳಿಯು ಪ್ರಯತ್ನ ಮಾಡುತ್ತಿದೆ. ಬ್ಯಾಂಕ್ ಆರಂಭಗೊಂಡು ಅಲ್ಪ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಶ್ರಮ ಹಾಗೂ ಸದಸ್ಯರ ಸಹಕಾರವು ಮಾನ್ಯನೀಯ.ಆರ್ಥಿಕ ಕ್ರೋಢೀಕರಣದೊಂದಿಗೆ ಸಂಘ ಮುನ್ನಡೆ ಸಾಧಿಸಲು ಸರ್ವರ ಸಹಕಾರ ಕೋರಿದರು.

ಸಂಘದ ನಿರ್ದೇಶಕರಾದ ಯು.ಕೆ. ಪ್ರೇಮಾವತಿ ಅವರು ವಾರ್ಷಿಕ ವರದಿ ವಾಚನ ಮಾಡಿದರು.ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪಟ್ಟಡ ಜಿ. ಪ್ರಕಾಶ್ ವಾರ್ಷಿಕ ಆಯವ್ಯಯ ಪತ್ರ ಮಂಡನೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ರಾಜ್ಯ ಸಹಕಾರಿ ಸೌಹಾರ್ದ ಸಂಘದ ಅಭಿವೃದ್ಧಿ ಅಧಿಕಾರಿ ಸುರೇಶ್ ಅವರು ಮಾತನಾಡಿದರು.

 ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ಉಪ ಅದ್ಯಕ್ಷರಾದ ಎ.ಡಿ. ಗಣಪತಿ, ನಿರ್ದೇಶಕರುಗಳಾದ ಯು. ಕೆ. ಪೊನ್ನಮ್ಮ, ಕೆ.ಎನ್. ಕಾರ್ಯಪ್ಪ, ಕೊಲ್ಲಿರ ಪಿ. ಚೋಂದಮ್ಮ, ಕೆ.ಎನ್. ಕಾವೇರಪ್ಪ, ಬಿ.ಜಿ. ಪ್ರತೀಶ್, ಟಿ.ಎಸ್. ನಾಣಯ್ಯ, ಎಂ.ಎ ಸಫೀರ,ಯು.ಕೆ. ಪ್ರೇಮಾವತಿ, ವಿ.ಸಿ. ಸುಧಿ, ಬಿ,ಎಂ. ಕೀರ್ತಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಗಗನ್ ಗಣಪತಿ ಸರ್ವರನ್ನು ಸ್ವಾಗತಿಸಿ ನಿರ್ದೇಶಕರಾದ ಬಿ.ಎಂ. ಕೀರ್ತಿ ವಂದಿಸಿದರು.

ಶ್ರೀ ಪಾವನಿ ಸಹಕಾರಿ ಸೌಹಾರ್ದ ಸಂಘ ನಿಯಮಿತ ಬ್ಯಾಂಕ್ ನ ವ್ಯವಸ್ಥಾಪಕರು ಎ.ಡಿ. ಗೀತ,ಮತ್ತು ಸಿಬ್ಬಂದಿಗಳು, ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ