ಸಿದ್ದಾಪುರ; ಪೊಲೀಸರನ್ನೇ ತಳ್ಳಿ ಹಾಕಿ ಕಾಫಿ ತೋಟಕ್ಕೆ ನುಗ್ಗಿ ಪರಾರಿಯಾಗಲು ಯತ್ನಿಸಿದ್ದ ಅಪರಾಧಿ ಅಂದರ್

Mar 9, 2026 - 19:47
Mar 9, 2026 - 19:50
 0  3.7k
ಸಿದ್ದಾಪುರ; ಪೊಲೀಸರನ್ನೇ ತಳ್ಳಿ ಹಾಕಿ ಕಾಫಿ ತೋಟಕ್ಕೆ ನುಗ್ಗಿ ಪರಾರಿಯಾಗಲು ಯತ್ನಿಸಿದ್ದ ಅಪರಾಧಿ ಅಂದರ್

ಸಿದ್ದಾಪುರ: ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಪೋಲೀಸರನ್ನು ಯಾಮಾರಿಸಿ ತಲೆ ಮರೆಸಿ ಕೊಂಡಿದ್ದ ಅಪರಾಧಿಯನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ಪತ್ರಕರ್ತ ವಸಂತ್ ಎಂಬುವವರೇ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿ ಕೊಂಡು ಜೈಲು ಪಾಲಾದ ಅಪರಾಧಿ.

ನೆಲ್ಲಿಹುದಿಕೇರಿ ನಿವಾಸಿ ಮೋಹದಾಸ್ ಅವರಿಂದ 2012ನೇ ಇಸವಿಯಲ್ಲಿ ಐವತ್ತು ಸಾವಿರ ಸಾಲ ಪಡೆದು ಕೊಂಡಿದ್ದ. ಮೋಹನ್ದಾಸ್ ನೀಡಿದ ದೂರಿನ ವಿಚಾರಣೆ ನಡೆಸಿದ ವಿರಾಜಪಟೆ ನ್ಯಾಯಾಲಯವು ವಸಂತ್ ಗೆ ಒಂದು ವರ್ಷ ಜೈಲು ಮತ್ತು ಒಂದು ಲಕ್ಷ ದಂಡ ವಿಧಿಸಿತು. ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆ ನಾಪತ್ತೆಯಾದ ವಸಂತ್ ಮೂರು ತಿಂಗಳಿನಿಂದ ಯಾರ ಸಂಪರ್ಕಕ್ಕೂ ಸಿಗದೇ ತಲೆ ಮರೆಸಿ ಕೊಂಡಿದ್ದ.

 ಸಿದ್ದಾಪುರ ಪಟ್ಟಣದಲ್ಲಿದ್ದ ಖಚಿತ ಮಾಹಿತಿ ಮೇರೆಗೆ ವಸಂತ್ ನನ್ನು ಸೆರೆಹಿಡಿಯಲು ಮುಂದಾದ ಪೊಲೀಸರನ್ನು ತಳ್ಳಿ ಹಾಕಿದ ವಸಂತ್ ಸಮೀಪದ ಕಾಫಿ ತೋಟಕ್ಕೆ ನುಗ್ಗಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಆತನ ಬೆನ್ನತ್ತಿದ ಪೋಲೀಸರು ಕಾಫಿ ತೋಟದೊಳಗೆ ಅಟ್ಟಾಡಿಸಿ ಹಿಡಿದು ಜೈಲಿಗೆ ಒಪ್ಪಿಸಿದ್ದಾರೆ. ಸಿದ್ದಾಪುರ ಪಿಎಸೈ ಮಂಜುನಾಥ್ ನೇತೃತ್ವದಲ್ಲಿ ವಸಂತ್ ನ ಬಂದನವಾಗಿದ್ದು ಎ ಎಸೈ ಶ್ರೀನಿವಾಸ್, ಪೊಲೀಸ್ ರೈಟರ್ ಹೆಚ್. ಎನ್ ಪ್ರಕಾಶ್ ಆಚಾರಿ, ಪೇದೆಗಳಾದ, ಮಣಿಕಂಠ ಮತ್ತು ಶ್ರೀನಿವಾಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೋಲೀಸರ ಸಾಹಸಮಯ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 3
Dislike Dislike 2
Love Love 1
Funny Funny 5
Angry Angry 0
Sad Sad 0
Wow Wow 1