Kodagu

ಸಿದ್ದಾಪುರ: ಕುಡಿದ ಅಮಲಿನಲ್ಲಿ ಜೀಪು ಚಾಲನೆ,ಕಾರ್ಮಿಕರಿಗೆ ಗಂಭೀರ ಗಾಯ: ಜೀಪು ಚಾಲಕ ಪೋಲಿಸ್ ವಶಕ್ಕೆ

admincoorgdaily

ಸಿದ್ದಾಪುರ: ಕುಡಿದ ಅಮಲಿನಲ್ಲಿ ಜೀಪು ಚಾಲನೆ,ಕಾರ್ಮಿಕರಿಗೆ ಗಂಭೀರ ಗಾಯ:  ಜೀಪು ಚಾಲಕ ಪೋಲಿಸ್ ವಶಕ್ಕೆ

ಕುಡಿದ ಅಮಲಿನಲ್ಲಿ ಜೀಪು ಚಾಲನೆ ಮಾಡಿ ಇಬ್ಬರು ಕಾರ್ಮಿಕರಿಗೆ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಜೀಪು ಚಾಲಕ ಪವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಮಿಕರಾದ ಸಿದ್ದಾಪುರ ನಿವಾಸಿ ಅಬ್ದುಲ್ ಫತಾಹ್ ಎಂಬುವವರಿಗೆ ಕಾಲಿಗೆ ಗಂಭೀರ ಗಾಯಗಳಾಗಿದ್ದು,ಹುಂಡಿ ನಿವಾಸಿ ಸುರೇಶ್ ಎಂಬುವವರಿಗೆ ಕುತ್ತಿಗೆ ಭಾಗಕ್ಕೆ ಗಾಯಗಳಾಗಿವೆ.ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ.