ಸಿದ್ದಾಪುರ: ಭಾರಿ ಮಳೆಗೆ ಕರಡಿಗೋಡು ಸಂಪರ್ಕ ರಸ್ತೆ ಕಡಿತ
admincoorgdaily

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕು ಅಮ್ಮತಿ ಹೋಬಳಿ ಕರಡಿಗೋಡು ಕಾವೇರಿ ನದಿ ಪಾತ್ರದಲ್ಲಿರುವ ಹೊಳೆಕೆಯಲ್ಲಿ ಭಾರಿ ಮಳೆಯಿಂದಾಗಿ ಕರಡಿಗೋಡು-ಚಿಕ್ಕನಳ್ಳಿ ಸಂಪರ್ಕ ರಸ್ತೆ ಕಡಿತಗೊಂಡಿದೆ.
ಘಟನಾ ಸ್ಥಳಕ್ಕೆ ನೋಡಲ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಕಡಿತಗೊಂಡ ಹಿನ್ನೆಲೆ ಸಾರ್ವಜನಿಕರು ಸಂಚರಿಸದಂತೆ ಬ್ಯಾರಿಕೆಡ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.