ಸಿದ್ದಾಪುರ; ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

Feb 17, 2026 - 18:14
 0  164
ಸಿದ್ದಾಪುರ; ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ

ಸಿದ್ದಾಪುರ : ಮಹಾ ಶಿವರಾತ್ರಿ ಅಂಗವಾಗಿ ಇಲ್ಲಿನ ಗೌರಿಶಂಕರ ದೇವಾಲಯದಲ್ಲಿ ಶಿವರಾತ್ರಿ ಆಚರಣೆಯನ್ನು ಶಿವನಾಮ ಸ್ಮರಣೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆ ಬೆಳಗಿನಿಂದಲೇ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮಹಾ ದೇವರ ಕೃಪೆಗೆ ಪಾತ್ರರಾದರು.

 ಹಬ್ಬದ ಅಂಗವಾಗಿ ಶಿವಲಿಂಗಕ್ಕೆ ಭಕ್ತಿ ಪೂರ್ವಕ ಕ್ಷೀರ, ಪಂಚಾಮೃತ, ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು. ಭಕ್ತರು ರಾತ್ರಿ ಜಾಗರಣೆ ಮಾಡುವ ಮೂಲಕ ಭಕ್ತಿಯಿಂದ ಅರ್ಥಪೂರ್ಣವಾಗಿ ಶಿವನಿಗೆ ಪೂಜಾ ಕಾರ್ಯವನ್ನು ನೆರವೇರಿಸಿದರು.

 ಶಿವರಾತ್ರಿ ಅಂಗವಾಗಿ ಶನಿವಾರದಿಂದಲೇ ಗೌರಿ ಶಂಕರನಿಗೆ ವಿಷೇಶ ಪೂಜಾ ಕಾರ್ಯ ಆರಂಭಗೊಂಡಿದ್ದು, ನಾಲ್ಕು ದಿನಗಳ ಕಾಲ ನಡೆಯಲಿದೆ. ಹಬ್ಬದ ಪ್ರಯುಕ್ತ ಪ್ರತಿ ದಿನ ಅನ್ನಸಂತರ್ಪಣೆಗೂ ಕೂಡ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಸುತ್ತಮುತ್ತಲ ಗ್ರಾಮಸ್ಥರು, ದೇವಾಲಯ ಸಮಿತಿ ಪ್ರಮುಖರು ಇದ್ದರು .

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0