Kodagu

ಸಿದ್ದಾಪುರ;ಕಾರಿನ ಮೇಲೆ ಕಾಡುಕೋಣ ದಾಳಿ

admincoorgdaily

ಸಿದ್ದಾಪುರ;ಕಾರಿನ ಮೇಲೆ   ಕಾಡುಕೋಣ ದಾಳಿ

ಸಿದ್ದಾಪುರ:-ಕಾಡುಕೋಣವೊಂದು ಕಾರಿನ ಮೇಲೆ ದಾಳಿನಡೆಸಿ ಜಖಂಗೊಳಿದ ಘಟನೆ ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮ ಪಂಚಾಯತ್ ವಾಪ್ತಿಯ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಆರೆಂಜ್ ಕೌಂಟಿ ಸಂಸ್ಥೆಗೆ ಸೇರಿದ ಕಾರು , ಚಾಲಕ ಪಟ್ಟಣಕ್ಕೆ ಬರುತ್ತಿದ್ದ ಸಂದರ್ಭ ಕಾಡುಕೋಣವು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸಾಗುವ ರಭಸಕ್ಕೆ ಕಾರಿಗೆ ಗುದ್ದಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ.

 ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಲಯ ಅರಣ್ಯಸಂರಕ್ಷಣಾಧಿಕಾರಿ ಶಿವರಾಂ ಅವರ ನಿರ್ದೇಶನದ ಮೇರೆಗೆ ವಲಯ ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ, ಆರ್, ಆರ್, ಟಿ ಸಿಬ್ಬಂದಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಭಾಗದಲ್ಲಿ ಇದೀಗ ಕಾಡುಕೋಣ ಹಾವಳಿ ಮಿತಿಮೀರಿದ್ದು ಕಳೆದ 20ದಿನಗಳ ಹಿಂದೆ ಗೂಡ್ಸ್ ವಾಹನದ ಮೇಲೆ ಕಾಡುಕೋಣವೊಂದು ದಾಳಿಮಾಡಿದ ಘಟನೆಯು ನಡೆದಿತ್ತು. ಕಾಡಾನೆಯೊಂದಿಗೆ ಕಾಡೆಮ್ಮೆಗಳು ಕಾಫಿ ತೋಟಗಳಲ್ಲಿ ಕಾಣಿಸಿಕೊಂಡು ಕಾರ್ಮಿಕರು ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ.

ಕರಡಿಗೋಡು ಭಾಗದಲ್ಲಿರುವ ಕಾಡು ಪ್ರಾಣಿಗಳನ್ನು ಕಾಡಿಗಟ್ಟಬೇಕೆಂದು ಸಾಮಾಜಿಕ ಕಾರ್ಯಕರ್ತ ಅಪ್ಸಲ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ನಿರಂತರ ಕಾಡುಪ್ರಾಣಿಗಳಾವಳಿಯಿಂದ ಕೃಷಿ ಪಸಲು ನಷ್ಟವಾಗುವುದರೊಂದಿಗೆ ಕಾರ್ಮಿಕರು ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತೇವೆ ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.