ಸಿದ್ದಾಪುರ: ಮನೆಯಿಂದ 150ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವು
admincoorgdaily

ಸಿದ್ದಾಪುರ:- ಮನೆಗೆ ಕನ್ನ ಹಾಕಿದ ಕಳ್ಳರು ಚಿನ್ನಾಭರಣ ಸೇರಿ ನಗದು ದೋಚಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ.
ಮೈಸೂರು ರಸ್ತೆಯ ನಿವಾಸಿ ಬಿಜಿ ಚಿನ್ನಪ್ಪ ಎಂಬವರ ಮನೆಗೆ 26ಡಿಸೆಂಬರ್ ಬೆಳಗ್ಗಿನ ಜಾವ 3.30ರ ಸುಮಾರಿಗೆ ಮನೆಯಲ್ಲಿ ದಂಪತಿಗಳು ಮಲಗಿದ್ದ ಸಂದರ್ಭದಲ್ಲಿ ಕನ್ನಹಾಕಿದ ಕಳ್ಳ ದುರಸ್ಥಿಗೆ ಬಿಟ್ಟಿದ್ದ ಬಾತುರೂಮಿನ ವೆಂಟಿಲೆಟರ್ ಮೂಲಕ ಮನೆಯ ಒಳಗೆ ನೂಗ್ಗಿ 15 ಗ್ರಾಂ ಚಿನ್ನದ ಚೈನ್ ಎರಡು, 20 ಗ್ರಾಂ ತೂಕದ ಆರು ಚಿನ್ನದ ಬಳೆ 10ಗ್ರಾಂ ಮೂರು ಉಂಗುರ,6ಗ್ರಾಂ ಚಿನ್ನದ ಮುತ್ತಿನ ಸರ, 4ಗ್ರಾಂ ಚಿನ್ನದ ಪೆಂಡೆಂಟ್, 20ಗ್ರಾಂ ಡಬ್ಬಲ್ ಚೖನ್, 40ಗ್ರಾಂನ ಕಾಸಿನ ಸರ ಹಾಗೂ 15ಗ್ರಾಂ ತೂಕದಕೊಕ್ಕೆ ತಾತಿ ಸೇರಿ ಒಟ್ಟು 150ಗ್ರಾಂ ಚಿನ್ನಾಭರಣ ಮತ್ತು5ಸಾವಿರ ನಗದು ದೋಚಿ ಪರಾರಿಯಾಗಿದ್ದಾನೆ.
ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಶ್ವಾನದಳ,ಬೆರಳಚುತ್ತಜ್ಞರೊಂದಿಗೆ ಹೆಚ್ಚುವರಿ ಪೊಲೀಸ್ ಅಧಿಕ ದಿನೇಶ್ ಕುಮಾರ್,ಡಿಎಸ್ಪಿ ಸೂರಜ್,ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳು ಮಹಜರು ನಡೆಸಿದರು,ಇದೇ ಸಂದರ್ಭ ಪ್ರಕರಣವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಿದ್ದು ಕ್ಷಿಪ್ರರ ಕಾರ್ಯಾಚರಣೆಗೆ ಮುಂದಾಗಿದ್ದಾರೆ.