ಮಾಲಂಬಿಯಲ್ಲಿ ಸಮಾಜ ಸೇವಾ ಶಿಬಿರ ಸಮಾರೋಪ

ಮಾಲಂಬಿಯಲ್ಲಿ ಸಮಾಜ ಸೇವಾ ಶಿಬಿರ ಸಮಾರೋಪ

ಶನಿವಾರಸಂತೆ : ಗ್ರಾಮೀಣ ಭಾಗದಲ್ಲಿ ಸಮಾಜ ಸೇವಾ ಶಿಬಿರ ಆಯೋಜನೆ ಮಾಡುವ ಮೂಲಕ ಶಿಬಿರಾರ್ಥಿಗಳು, ಜನರ ಮನಗೆದ್ದಿದ್ದಾರೆ ಎಂದು ಹೊಳೆನರಸೀಪುರ ಪಡವಲಹಿಪ್ಪೆ ಶ್ರೀ ಹೆಚ್ ಡಿ ದೇವೇಗೌಡ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಪಕ ಡಾ. ಭುವನೇಂದ್ರ ಹೇಳಿದರು.

 ಇವರು ಈ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ 10ದಿನ ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಕರು ಪ್ರತಿಷ್ಠೆಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದಿರುವುದರಿಂದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿದೆ. ಇದಕ್ಕೆ ಕಾರಣ ಪೋಷಕರು, ಗ್ರಾಮಸ್ಥರು. ಪೋಷಕರು ಎಚ್ಚತ್ತುಕೊಳ್ಳಬೇಕು. ಓದುವ ಮಕ್ಕಳು ಯಾವುದೇ ಶಾಲೆಯದರು ವಿದ್ಯಾಭ್ಯಾಸ ಕಲಿಯುತ್ತಾರೆ. ಮಾಲಂಬಿ ಗ್ರಾಮಸ್ಥರು ಈ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಸಹಕಾರ ನೀಡಿರುವುದು ಶ್ಲಾಘನೀಯ.

 ಇಂದು ನಾವು ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರು ಕಲಿಸುವ ಮಕ್ಕಳು ಯಾವ ಉನ್ನತ ಉದ್ದೆಗೆ ಬೇಕಾದರು ಹೋಗಲು ಅವಕಾಶ ಇದ್ದು ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಗುರು ಹಿರಿಯರನ್ನು ಗೌರವಿಸಬೇಕೆಂದು ಎಂದರು.

ಶಿಬಿರ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಡಾ. ಹೆಚ್ ಎನ್. ದೀಪು ಮಾತನಾಡಿ, ಈ ನಮ್ಮ ಶಿಬಿರ ಯಶಸ್ವಿಗೆ ಕಾರಣ ಮಾಲಂಬಿ ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಯಾವುದೇ ಸಣ್ಣ ಪುಟ್ಟ ಸಮಸ್ಯೆ ಆಗದ ರೀತಿಯಲ್ಲಿ ಶಿಬಿರ ಯಶಸ್ವಿಗೊಂಡಿದೆ.ಬೇರೆ ಶಿಬಿರಗಳಿಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಮಾಜ ಸೇವಾ ಶಿಬಿರಕ್ಕೂ ಅಜಾಗಜಾಂತರ ವ್ಯತ್ಯಾಸವಿದ್ದು, ಇಲ್ಲಿ ನಾವು ಮಾಡಿ ಒದಗಿಸುವ ವರದಿ ಗ್ರಾಮದ ಅಭಿವೃದ್ಧಿಗೂ ಸಹಕಾರ ಆಗಲಿದೆ. ಪ್ರತಿ ಮನೆಗಳನ್ನು ಭೇಟಿ ಮಾಡಿ ವರದಿ ತಯಾರು ಮಾಡಬೇಕಿದೆ. ಆ ರೀತಿಯ ಕೆಲಸ ಈ ಶಿಬಿರದಲ್ಲಿ ಮಾಡಲಾಗಿದೆ. ಇದಕ್ಕೆ ಗ್ರಾಮಸ್ಥರ ಮನೆಗಳಿಗೆ ತೆರಳುವಾಗ ಅವರು ನೀಡುತಿದ್ದ ಮಾಹಿತಿ ಸಮರ್ಪಕಶ್ವಗುರುತ್ತಿತ್ತು ಎಂದರು. ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ಮಾತನಾಡಿ ಈ ಶಿಬಿರದಲ್ಲಿ ನಾವು ಆರೋಗ್ಯ ತಪಾಸಣಾ ಶಿಬಿರ, ಪಶು ಚಿಕಿತ್ಸೆ ಶಿಬಿರ ಚಾರಣ, ಸಂಸ್ಕೃತಿಕ ಕಾರ್ಯಕ್ರಮ ಗ್ರಾಮದ ಮಕ್ಕಳಿಗೆ ವಿವಿಧ ಸ್ಪರ್ಧೆ, ಅನೇಕ ಈ ಭಾಗಕ್ಕೆ ಬೇಕಾಗುವ ರೀತಿಯ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಸಿದ್ದೇವೆ ಇದು ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ ಎಲ್ಲಾ ಕಾರ್ಯಕ್ರಮಗಳಿಗೂ ಜನರು ಪಾಲ್ಗೊಂಡಿದ್ದರು ಎಂದರು.

 ಸಹಾಯಕ ಪ್ರಾಧ್ಯಾಪಕಿ ರೇಖಾಶ್ರೀ ಮಾತನಾಡಿ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚು ಭಾಗವಹಿಸಿದ್ದರು ಕಳೆದ ಹತ್ತು ದಿನಗಳು ಕಳೆದರು ಶಿಬಿರದಲ್ಲಿ ಯಾವುದೇ ಸಣ್ಣ ಸಮಸ್ಯೆಗಳು ಆಗಲಿಲ್ಲ ಇದಕ್ಕೆ ಗ್ರಾಮಸ್ಥರೆ ಕಾರಣ ಗ್ರಾಮಸ್ಥರು ನೀಡಿದ ಸಹಕಾರ ನಿರೀಕ್ಷೆಗೂ ಮೀರಿದೆ ಎಂದ ಇವರು ನಮ್ಮ ಮನೆಯ ಮಕ್ಕಳು ಎಂಬಂತೆ ಗ್ರಾಮಸ್ಥರು ತಮ್ಮ ಮಕ್ಕಳನ್ನ ನೋಡಿಕೊಂಡರು ಎಂದರು.

 ಈ ಸಂದರ್ಭದಲ್ಲಿ ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಮಾಲಂಬಿ ವಾಲ್ಮೀಕಿ ಆಶ್ರಮ ಶಾಲಾ ಮುಖ್ಯ ಶಿಕ್ಷಕ ಆನಂದ್, ಶಿಕ್ಷಕ ವಿಜೇಂದ್ರ, ಹಾರೆಹೊಸೂರು ಸರ್ಕಾರಿ ಶಾಲಾ ಶಿಕ್ಷಕ ಯಶವಂತ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮುತ್ತಮ್ಮ, ಗ್ರಾಮಸ್ಥ ಎಂ.ಡಿ. ಸುರೇಶ್, ಪ್ರಸನ್ನ, ಸಿ. ಕೆ ಸುರೇಶ್. ಕೆ. ಎನ್ ದಿನೇಶ್,ಮಲ್ಲೇಶ್, ರಮೇಶ್, ಗಣೇಶ್ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಪರವಾಗಿ ಶಿಬಿರ ಸಂಯೋಜಕರಾದ ದೀಪು, ವೆಂಕಟೇಶ್, ರೇಖಾಶ್ರೀ ಇವರನ್ನು ಸನ್ಮಾನ ಮಾಡಿದರು.