ಮಾಲಂಬಿಯಲ್ಲಿ ಸಮಾಜ ಸೇವಾ ಶಿಬಿರ

Apr 7, 2026 - 12:37
 0  139
ಮಾಲಂಬಿಯಲ್ಲಿ ಸಮಾಜ ಸೇವಾ ಶಿಬಿರ

ಶನಿವಾರಸಂತೆ:ಪಡವಲಹಿಪ್ಪೆ ಹೊಳೆನರಸೀಪುರ ಶ್ರೀ ಹೆಚ್ ಡಿ ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ 10ದಿನ ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದ ಅಂಗವಾಗಿ ಶಿಬಿರದ ವಿದ್ಯಾರ್ಥಿಗಳಿಂದ ಹಾಗೂ ಮಾಲಂಬಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಮಕ್ಕಳಿಂದ ಹಾಗೂ ಮಾಲಂಬಿ ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮ ವನ್ನು ಪತ್ರಕರ್ತ ಮಾಲಂಬಿ ದಿನೇಶ್ ಉದ್ಘಾಟನೆ ಮಾಡಿದರು ನಂತರ ಮಾತನಾಡಿ, ಇಂದು ಅನೇಕ ಯುವ ಸಮೂಹ ತಮ್ಮ ಕರ್ತವ್ಯ ಮರೆತು ಸಾಗುತ್ತಿರುವುದು ದುರಂತ. ಮಾನವೀಯತೆ ಹಾಗೂ ಸಂಸ್ಕಾರ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ.ಹೊಳೆನರಸೀಪುರ ಹೆಚ್ ಡಿ ದೇವೇಗೌಡ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಂತಹ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬುಡಕಟ್ಟು ಜನಾಂಗದವರು ಇರುವ ಹಾಡಿಯಲ್ಲಿ ಶಿಬಿರ ಆಯೋಜನೆ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಇವರನ್ನು ಕರೆತರುವ ಪ್ರಯತ್ನ ಶ್ಲಾಘನೀಯ.

ಇಂತಹ ಸ್ಥಳ ಆಯ್ಕೆ ಮಾಡಿ ಇಲ್ಲಿ ಇವರ ಬದುಕು ಇನ್ನಿತರ ಇವರ ಸಂಸ್ಕೃತಿ, ಸಂಸ್ಕಾರ ಇವುಗಳನ್ನು ಕಲಿಯಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

 ಮಾಲಂಬಿ ಗ್ರಾಮಸ್ಥರಾದ ಸುರೇಶ್ ಮಾತನಾಡಿ ಇಂದು ಅನೇಕ ಯುವ ಸಮೂಹ ದುಶ್ಚಟ ಕ್ಕೆ ಬಲಿಯಾಗುತ್ತಿರುವುದು ದುರಂತ, ಯುವ ಸಮೂಹ ಮಾದಕ ವ್ಯಾಸನದಿಂದ ದೂರ ಇರಬೇಕು ನಮ್ಮ ಜೀವನ ಶೈಲಿ ಬದಲಾಗಬೇಕು ಎಂದರು.

 ವೇದಿಕೆಯಲ್ಲಿ ಗ್ರಾಮಸ್ಥಾರಾದ ಬೆಳ್ಳಿಯಪ್ಪ, ಜ್ಯೋತಿ ಬೆಳ್ಳಿಯಪ್ಪ, ಸ್ವಾತಿ ಪ್ರಸನ್ನಕುಮಾರ್ , ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವೀಣಾ ರಮೇಶ್, ಮುತ್ತಮ್ಮ ಗಣೇಶ್ , ಡಾ. ದೀಪು ಶಿಬಿರ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಉಪನ್ಯಾಸಕರಾದ .ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ಕಾವ್ಯಾ,ರೇಖಾಶ್ರೀ. ಮೇಘಶ್ರೀ ಹಾಗೂ ಮಾಲಂಬಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

 ಮಕ್ಕಳಿಂದ ನೃತ್ಯ, ಹಾಗೂ ಪ್ರಾದ್ಯಪಾಕರಿಂದ ಹಾಡು ಸಾಮಾಜಿಕ ನಾಟಕ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮದ ಮಹಿಳೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆ ನಡೆಸಿದರು ನಡೆಯಿತು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 2