ಸಮಾಜ ಸೇವಾ ಶಿಬಿರ; ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

Apr 8, 2026 - 23:32
 0  209
ಸಮಾಜ ಸೇವಾ ಶಿಬಿರ; ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ

ಶನಿವಾರಸಂತೆ:ಸರ್ಕಾರದಿಂದ ಆರೋಗ್ಯಕ್ಕೆ‌ ಸಂಬಂಧಿಸಿದಂತೆ ಸಿಗುವ ಸೌಲಭ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಲೂರು ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯೋಗ್ಯ ನಿರೀಕ್ಷಕ ಪ್ರವೀಣ್ ಕರೆ ನೀಡಿದರು.

 ಹೊಳೆನರಸೀಪುರ ಪಡವಲಹಿಪ್ಪೆ ಶ್ರೀ ಹೆಚ್ ಡಿ ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ 10ದಿನ ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಅನೇಕ ಚಿಕಿತ್ಸೆಯು ಜನರ ಮನೆ ಬಾಗಿಲಿಗೆ ತಲುಪುತಿದ್ದು ಎಲ್ಲಾ ರೋಗಗಳಿಗೂ ಚಿಕಿತ್ಸೆಯನ್ನು ಒದಗಿಸುತ್ತಿದೆ.ಜನರು ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಲು ಹಿಂಜರಿಕೆ ಮಾಡುತ್ತಿರುವ ಉದ್ದೇಶದಿಂದ ಈ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಉತ್ತಮ ಜನಸೇವೆ ಮಾಡುತ್ತಿರುವುದು ಶ್ಲಾಘನೀಯ. ಆರೋಗ್ಯ ಸೊಲ್ಪ ಹದಗೆಟ್ಟ ತಕ್ಷಣ ವೈದ್ಯರನ್ನು ಕಾಣಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು, ಆರೋಗ್ಯ ಚೆನ್ನಾಗಿದ್ದರೆ ಬದುಕೇ ಸುಂದರವಾಗಿರುತ್ತದೆ ಯಾವುದೇ ಆರೋಗ್ಯ ಸಮಸ್ಯೆಯನ್ನು ಸರಳವಾಗಿ ತೆಗೆದುಕೊಳ್ಳಬಾರದು ಎಂದರು.

 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಪತ್ರಕರ್ತ ಸುರೇಶ್ ಇಂದು ಆರೋಗ್ಯವೇ ಭಾಗ್ಯ. ನಾವು ಆರೋಗ್ಯವಾಗಿದ್ದರೆ ಮಾತ್ರ ಸಂಪಾದನೆ ಮಾಡಲು ಹಾಗೂ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ.ಆರೋಗ್ಯ ಚಿಕಿತ್ಸೆ ಮಾಹಿತಿಯನ್ನು ತಮ್ಮ ಪೋಷಕರಿಗೆ ತಿಳಿಸಬೇಕು ಎಂದರು. ಗಿರಿಜನ ಹಾಡಿ ಮುಖಂಡ ರಮೇಶ್ ಮಾತನಾಡಿ ಇಂದು ಗಿರಿಜನ ಹಾಡಿಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ , ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ , ಮುತ್ತಮ್ಮ ಗಣೇಶ್, ಶಿಬಿರ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಡಾ. ಹೆಚ್ ಎನ್. ದೀಪು .ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ರೇಖಾಶ್ರೀ. ಸಮುದಾಯ ಆರೋಗ್ಯ ಅಧಿಕಾರಿ ಅನುಷಾ, ಹಾಗೂ ಅನುಶ್ರೀ ಮತ್ತು ಇಂದಿರಾ ಹಾಗೂ ಗ್ರಾಮಸ್ಥರಾದ ಎಂ. ಡಿ.. ಸುರೇಶ್, ಪತ್ರಕರ್ತ ಮಾಲಂಬಿ ದಿನೇಶ್,ಇತರರಿದ್ದರು.ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿದರು ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0