ಕುಂಬೂರು ಪೈಸಾರಿ ಸ್ಥಳೀಯರಿಗೆ ಮೀಸಲಿಡಲು ಸೋಮಪ್ಪ ಆಗ್ರಹ

May 11, 2026 - 19:28
 0  441
ಕುಂಬೂರು ಪೈಸಾರಿ ಸ್ಥಳೀಯರಿಗೆ ಮೀಸಲಿಡಲು ಸೋಮಪ್ಪ ಆಗ್ರಹ

ಮಡಿಕೇರಿ: ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಕುಂಬೂರು ಗ್ರಾಮದ ಸರ್ವೆ ನಂ. 125/1ರ ಪೈಸಾರಿ ಜಾಗವನ್ನು ಸ್ಥಳೀಯ ಅರ್ಜಿದಾರರಿಗೆ ಮಾತ್ರ ಹಂಚಬೇಕು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಆಗ್ರಹಿಸಿದರು.

 ಲಕ್ಕೇರಿಯಲ್ಲಿ ಬಹುಜನ ಕಾರ್ಮಿಕ ಸಂಘ 9 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಅರ್ಥಹೀನ. 20 ವರ್ಷಗಳಿಂದ 500ಕ್ಕೂ ಅಧಿಕ ಸ್ಥಳೀಯರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

 ಲಕ್ಕೇರಿಯಲ್ಲಿ 13 ಕೆ.ವಿ ವಿದ್ಯುತ್ ಮಾರ್ಗ ಹಾದು ಹೋಗಲಿದ್ದು, ವಾಸಕ್ಕೆ ಯೋಗ್ಯವಲ್ಲ ಎಂದು ಚೆಸ್ಕಾಂ ಸೂಚಿಸಿದೆ. ಬೇರೆ ಗ್ರಾ.ಪಂ ವ್ಯಾಪ್ತಿಯವರಿಗೆ ನೀಡಿದರೆ ವಿರೋಧಿಸುತ್ತೇವೆ. ವಿದ್ಯುತ್ ಮಾರ್ಗ ಅಡ್ಡಿಯಾದರೆ ಪರ್ಯಾಯ ಜಾಗ ಗುರುತಿಸಿ ಸ್ಥಳೀಯರಿಗೆ ನಿವೇಶನ ನೀಡಿ, ಸಣ್ಣ ಹಿಡುವಳಿದಾರರಿಗೆ ಹಕ್ಕುಪತ್ರ ಕೊಡಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಫಿಲೋಮಿನಾ ಡಿಸೋಜ, ಶಾಂತಿ ಯೋಗೇಶ್, ಪಾರ್ವತಿ ಮಂಜು, ಲತಾ ಕೊರಗಪ್ಪ ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0