ಸೋಮವಾರಪೇಟೆ;ಮರಬಿದ್ದು ಬೆಳೆಗಾರ ದುರ್ಮರಣ

Jun 12, 2026 - 09:12
 0  1.4k
ಸೋಮವಾರಪೇಟೆ;ಮರಬಿದ್ದು ಬೆಳೆಗಾರ ದುರ್ಮರಣ

ಮಡಿಕೇರಿ, ಜೂ. 11: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರ ವೊಂದು ಬಿದ್ದು ಬೆಳೆಗಾರ ದುರ್ಮರಣಕ್ಕೀಡಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕತೋಳೂರು ಗ್ರಾಮದ ಬೆಳೆಗಾರ ನಂದೀಶ್(51) ಎಂಬವರೇ ಸಾವನ್ನಪ್ಪಿದವರು.

 ನಿನ್ನೆ ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಒಣಗಿದ ಮರವೊಂದು ಧರಾಶಾಹಿ ಯಾಗಿದ್ದು, ಕೆಳಭಾಗದಲ್ಲಿದ್ದ ನಂದೀಶ್ ಅವರ ಮೇಲೆ ಬಿದ್ದಿದೆ. ಘಟನೆಯಿಂದ ನಂದೀಶ್ ಅವರು ಗಂಭೀರ ತಕ್ಷಣ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆದಾಖಲಿಸಲಾಯಿತು . ಆದರೆ ಚಿಕಿತ್ಸೆ ಫಲಕಾರಿ ಯಾಗದೇ ಅಸುನೀಗಿದರು. ಮರ ಬಿದ್ದ ರಭಸಕ್ಕೆ ನಂದೀಶ್ ಅವರ ಪಕ್ಕೆಲುಬುಗಳು ಮುರಿತಕ್ಕೊಳಗಾಗಿದ್ದು, ಹೃದಯ ಹಾಗೂ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು. ಮೃತರು ಪತ್ನಿ ಪವಿತ್ರ ಸೇರಿದಂತೆ ಓರ್ವ ಪುತ್ರ ಪುತ್ರಿಯನ್ನು ಹಾಗೂ ಓರ್ವ ಅಗಲಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 2
Angry Angry 0
Sad Sad 2
Wow Wow 0