ಸೋಮವಾರಪೇಟೆ: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ 3 ಶಿಕ್ಷಕರು ಮತ್ತು 13 ಸಹಾಯಕಿಯರಿಗೆ ಆದೇಶ ಪತ್ರ ವಿತರಿಸಿದ ಶಾಸಕ ಡಾ.ಮಂತರ್ ಗೌಡ

Aug 11, 2026 - 12:07
 0  119
ಸೋಮವಾರಪೇಟೆ: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ 3 ಶಿಕ್ಷಕರು ಮತ್ತು 13 ಸಹಾಯಕಿಯರಿಗೆ ಆದೇಶ ಪತ್ರ  ವಿತರಿಸಿದ ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ: ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಆಯ್ಕೆಯಾಗಿರುವ 3 ಶಿಕ್ಷಕರು ಮತ್ತು 13 ಸಹಾಯಕಿಯರಿಗೆ ಶಾಸಕ ಮಂತರ್‌ಗೌಡ ಕಾರ್ಯಾದೇಶ ಪತ್ರಗಳನ್ನು ಸೋಮವಾರ ಶಾಸಕರ ಕಚೇರಿಯಲ್ಲಿ ವಿತರಿಸಿದರು.

ನಂತರ ಅವರು ಮಾತನಾಡಿ, ಮಕ್ಕಳ ಅರೈಕೆಯಲ್ಲಿ ತಾರಾತಮ್ಯ ಮಾಡಬಾರದು. ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಸರ್ಕಾರದಿಂದ ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರವನ್ನು ಕೊಡಬೇಕು. ಮೋಸ ಮಾಡುವ ಕೃತ್ಯಕ್ಕೆ ಕೈಹಾಕಿದರೆ ಸಿಕ್ಕಿರುವ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಂಗವಾಡಿಯಲ್ಲಿ ಮಕ್ಕಳ ಸಂಕ್ಯೆಯನ್ನು ಹೆಚ್ಚು ಬರೆದು ಸರ್ಕಾರಕ್ಕೆ ವಂಚನೆ ಮಾಡಲು ಮುಂದಾದರೆ, ಸಿಕ್ಕಿಬೀಳಲೇ ಬೇಕು. ಈಗಾಗಲೇ ಅರೋಪಗಳು ಕೇಳಿಬಂದಿವೆ. ಮುಂದೆ ತಪ್ಪಾದರೆ ಅಧಿಕಾರಿಗಳು ಮತ್ತು ಅಂಗವಾಡಿ ಶಿಕ್ಷಕರು ನೇರಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

 ಅಂಗನವಾಡಿ ಕಟ್ಟಡಗಳು ಸುಭದ್ರವಾಗಿರಬೇಕು. ಕಟ್ಟಡದಲ್ಲಿ ಸಮಸ್ಯೆ ಕಂಡುಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅಂಗನವಾಡಿ ಶಿಕ್ಷಕರಿಗೆ ಸೂಚಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0