ಮಗ ನದಿ ಪಾಲು: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ! ಹೃದಯ ವಿದ್ರಾವಕ ಘಟನೆ

Jul 25, 2025 - 12:36
Jul 25, 2025 - 12:36
 0  434
ಮಗ ನದಿ ಪಾಲು: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!  ಹೃದಯ ವಿದ್ರಾವಕ ಘಟನೆ

ಚಿಕ್ಕಮಗಳೂರು: ಪಿಕಪ್ ವಾಹನ ಅಪಘಾತ ಸಂಭವಿಸಿ ವಾಹನ ಸಹಿತ ಚಾಲಕ ನದಿಪಾಲಾದ ಸುದ್ದಿಯಿಂದ ನೊಂದ ಚಾಲಕನ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲುಕಿನಲ್ಲಿ ಗುರುವಾರ ಸಂಜೆ ವರದಿಯಾಗಿದೆ. ರವಿಕಲಾ(೫೮)ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ.

 ಬುಧವಾರ ರವಿಕಲಾ ಪುತ್ರ ಶಮಂತ್ ಕಳಕೋಡು ಗ್ರಾಮಕ್ಕೆತನ್ನ ಪಿಕ್ ಅಪ್ ನಲ್ಲಿ ತೋಟದ ಕಾರ್ಮಿಕರನ್ನು ಬಿಟ್ಟು ಕಳಸದ ಕಡೆ ಹಿಮದಿರುಗುತ್ತಿದ್ದ ವೇಳೆ ಹೊಸೂರು ಎಂಬಲ್ಲಿ‌ಭದ್ರಾ ನದಿ ತೀರದಲ್ಲಿದ್ದ ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಢಿಕ್ಕಿಯಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಭದ್ರಾ ನದಿಗೆ ಉರುಳಿದೆ, ಚಾಲಕ‌ ಶಮಂತ್ ಕೂಡ ವಾಹದೊಂಇಗೆ ನದಿ ಯಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳದಲ್ಲಿ ಅಪಘಾತದ ಕುರುಹು ಕಂಡವರು ಪೊಲೀಸರೀಗೆ ಮಾಹಿತಿ ನೀಡಿದ್ದಾರೆ. ಹುಡುಕಾಟ ನಡೆಸಿದರೂ ವಾಹನ ಹಾಗೂ ಚಾಲಕನ ಸುಳಿವು ಪತ್ತೆಯಾಗಿಲ್ಲ. ಪಿಕಪ್ ವಾಹನ‌ ಶಮಂತ್ ನದ್ದು ಎಂದು ಗುರುತು ಪತ್ತೆಯಾದ ಬಳಿಕ ಶಮಂತ್ ನ ಪೋಷಕರು ಸ್ಥಳಕ್ಕೆ ಬಂದು ಕಣ್ಣೀರು ಹಾಕಿದ್ದಾರೆ. ಆತನ ಮೊಬೈಲ್ ಸ್ವಿಚ್ ಆಫ್ ಅಗಿರುವುದು, ಮನೆಗೆ ಬಾರದಿರುವುದು ಮತ್ತು ಆತ ಬೆಳಗ್ಗೆ ಕಾರ್ಮಿಕರೊಂದಿಗೆ ಕಳಕೋಡು ಗ್ರಾಮಕ್ಕೆ ಬಂದು ಹಿಂದಿರುಗಿದ್ದರಿಂದ ಶಮಂತ್ ಹಾಗೂ ಪಿಕಪ್ ವಾಹನ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವುದು ಖಾತ್ರಿಯಾಗಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಶಮಂತ್ನ ತಾಯಿ ಬುಧವಾರ ಸಂಜೆಯಾಗುತ್ತಿದ್ದಂತೆ ಸಮೀಪದಲ್ಲೆ ಇದ್ದ ಕೆರೆಗೆ ಹಾರಿ ಆತ್ಮಹತ್ತೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನ‌ಮೃತದೆಹ ಸಿಗುವ ಮುನ್ನವೇ ತಾಯಿ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಅಘ್ನಿಶಾಮಕದಳದವರು ಪೊಲೀಸರು, ಸಾರ್ವಜನಿಕರು ಶಮಂತ್ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ನದಿಯಲ್ಲಿ‌ ನೀರಿನ ಹರಿವು ಹೆಚ್ಚಾಗಿರುವುದರಿಂದ ಶೋದ ಕಾರ್ಯಕ್ಕೆ ಭಾರೀ ತೊಂದರೆಯಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 4
Wow Wow 0