ಶ್ರೀಮಂಗಲ: ಕಾಯಿಮನಿ ಬಳಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

Apr 8, 2026 - 10:03
 0  1.2k
ಶ್ರೀಮಂಗಲ: ಕಾಯಿಮನಿ ಬಳಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

ಪೊನ್ನಂಪೇಟೆ; ತಾಲೂಕಿನ ಶ್ರಿಮಂಗಲ ಹೋಬಳಿಯ ಕುರ್ಚಿ ಕಾಯಿಮನಿ ನಡುವಿನ ನಿವಾಸಿ ಮೂಕಳೆರ ರತ್ತು ಎಂಬುವರು ಮನೆಯ ಸಮೀಪ ತೋಟದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ರತ್ತು ಅವರು ಈ ಹಿಂದೆ ಅಪಘಾತಕ್ಕೆ ಸಿಲುಕಿ ಅಂಗವೈಖಲ್ಯ ಹೊಂದಿದ್ದು, ಕಾಡಾನೆ ದಾಳಿಗೆ ಸಿಲುಕಿದ್ದಾರೆ. ಬೆಳ್ಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಕಾಡಾನೆ ದಾಳಿ ನಡೆದಿದೆ. ರತ್ತು ಅವರ ಮೃತದೇಹವನ್ನು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ .

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 2
Wow Wow 0