ತಡಿಯಂಡಮೋಳ್ ಬೆಟ್ಟದ ಬಗ್ಗೆ ಹಾಸ್ಯ, ಅವಹೇಳನ ಮತ್ತು ಅಪಮಾನಕಾರಿ ಪೋಸ್ಟ್‌ಗಳನ್ನು ತಕ್ಷಣ ನಿಲ್ಲಿಸಿ:ಮಾದಂಡ ತಿಮ್ಮಯ್ಯ

Apr 10, 2026 - 00:54
 0  1.1k
ತಡಿಯಂಡಮೋಳ್ ಬೆಟ್ಟದ ಬಗ್ಗೆ ಹಾಸ್ಯ, ಅವಹೇಳನ ಮತ್ತು ಅಪಮಾನಕಾರಿ ಪೋಸ್ಟ್‌ಗಳನ್ನು ತಕ್ಷಣ ನಿಲ್ಲಿಸಿ:ಮಾದಂಡ ತಿಮ್ಮಯ್ಯ
ಮಾದಂಡ ತಿಮ್ಮಯ್ಯ

4ಕೊಡಗು ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ತಡಿಯಂಡಮೋಳ ಬೆಟ್ಟ ಕೇವಲ ಒಂದು ಪ್ರವಾಸಿ ತಾಣವಲ್ಲ,ಇದು ಅನೇಕ ಜನರ ನಂಬಿಕೆ, ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯೊಂದಿಗಿನ ಪವಿತ್ರ ಸ್ಥಳವಾಗಿದೆ. ವಿಶೇಷವಾಗಿ ಕೊಡವ ಸಮುದಾಯ ಸೇರಿದಂತೆ ಸ್ಥಳೀಯರು ಈ ಬೆಟ್ಟವನ್ನು ಅತ್ಯಂತ ಗೌರವದಿಂದ ಕಾಣುತ್ತಿರುಚ, ಆರಾಧನೆಯ ಸಂಕೇತವಾಗಿ,ಇಡೀ ವಿಶ್ವದೆಲ್ಲೆಡೆ ಪರಿಚಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಡಿಯಂಡಮೋಳ್ ಬೆಟ್ಟದ ಬಗ್ಗೆ ಹಾಸ್ಯ, ತಮಾಷೆ, ಮೀಮ್ಸ್, ಅವಹೇಳನಕಾರಿ ಕಾಮೆಂಟ್‌ಗಳು ಹಾಗೂ ಅಸಂಬದ್ಧ ಹೇಳಿಕೆಗಳು ಹರಿದಾಡುತ್ತಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ.

ಇಂತಹ ನಡೆ-ನುಡಿಗಳು ಕೇವಲ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಲ್ಲದೆ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಪವಿತ್ರ ನಂಬಿಕೆಗಳನ್ನೇ ಅವಮಾನಿಸುವಂತಾಗಿದೆ.

ಒಂದು ಸಮುದಾಯದ ಆರಾಧನೆಗೆ ಸಂಬಂಧಿಸಿದ ಸ್ಥಳದ ಬಗ್ಗೆ ತಗ್ಗಿಸಿ ಮಾತನಾಡುವುದು, ಮನರಂಜನೆಯ ವಿಷಯವನ್ನಾಗಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಾತ್ಮಕವಾಗಿ ಪ್ರದರ್ಶಿಸುವುದು ಯಾವ ರೀತಿಯಲ್ಲೂ ಅಂಗೀಕರಿಸುವ ವಿಷಯವಲ್ಲ.

ನನ್ನದೊಂದು ಮನವಿ;

 ತಡಿಯಂಡಮೋಳ್ ಬೆಟ್ಟದ ಬಗ್ಗೆ ಹಾಸ್ಯ, ಮೀಮ್ಸ್ ಹಾಗೂ ಅವಹೇಳನಕಾರಿ, ಪೋಸ್ಟ್‌ಗಳನ್ನು ತಕ್ಷಣ ನಿಲ್ಲಿಸಬೇಕು.ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ.ನಮ್ಮ ಪವಿತ್ರ ಸ್ಥಳಗಳು, ಸಂಸ್ಕೃತಿ ಮತ್ತು ನಂಬಿಕೆಗಳಿಗೆ ಗೌರವ ನೀಡಬೇಕು.

 ಪ್ರವಾಸೋದ್ಯಮದ ಹೆಸರಿನಲ್ಲಿ ಪವಿತ್ರತೆಯನ್ನು ಹಾಳು ಮಾಡುವ ವರ್ತನೆಗಳನ್ನು ತಪ್ಪಿಸಬೇಕು.ತಡಿಯಂಡಮೋಳ್ ನಮ್ಮ ಹೆಮ್ಮೆ, ನಮ್ಮ ನಂಬಿಕೆ, ನಮ್ಮ ಆರಾಧನೆಅದನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ.

ಧನ್ಯವಾದಗಳು

 ಪ್ರೀತಿಯಿಂದ,ನಿಮ್ಮವ,

ಮಾದಂಡ ತಿಮ್ಮಯ್ಯ ಮಾಜಿ, ಅಂತರರಾಷ್ಟ್ರೀಯ ರಗ್ಬಿ ಆಟಗಾರ

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 2
Wow Wow 0