ಆದಿವಾಸಿಗಳ ಅಧ್ಯಯನ ಪ್ರವಾಸ;ಡಾ.ಕಾವೇರಿ ಜಪಾನ್ ಗೆ
admincoorgdaily

ಮಡಿಕೇರಿ;,ಜಪಾನ್ ನಲ್ಲಿ ನಡೆಯುತ್ತಿರುವ ಆದಿವಾಸಿಗಳ ಪಾರಂಪರಿಕ ಜ್ಞಾನ ಅಧ್ಯಯನಪ್ರವಾಸಕ್ಕೆ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ , ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ , ಪಾಲಿಬೆಟ್ಟದ ಡಾ. ಕಾವೇರಿ, ಆಯ್ಕೆಗೊಂಡಿದ್ದಾರೆ.
ಹಲವು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಕಾವೇರಿ ಅವರು ಕೊಡಗಿನ ಬುಡಕಟ್ಟುಗಳ ಮೌಖಿಕ ಸಾಹಿತ್ಯ ಎಂಬ ವಿಷಯದಲ್ಲಿ ಪಿಎಚ್ ಡಿ ಪದವಿ ಪಡೆದವರು. ದಕ್ಷಿಣ ಏಷ್ಯಾ ದೇಶಗಳ ಆದಿವಾಸಿಗಳ ಪಾರಂಪರಿಕ ಜ್ಞಾನ ಗ್ರಾಮೀಣ ನಾಯಕತ್ವ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತು ಜಪಾನ್ ದೇಶದಲ್ಲಿ ಒಂಭತ್ತು ತಿಂಗಳ ಕಾಲ ಈ ಅಧ್ಯಯನ ಪ್ರವಾಸ ನಡೆಯಲಿದೆ.
ಕಾವೇರಿ ಅವರು ದಿನಾಂಕ 23ರಂದು ಜಪಾನ್ ಗೆ ತೆರಳಿದ್ದಾರೆ. ಅಧ್ಯಯನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಅವರು ಮರಳಿ ಬರುವಂತಾಗಲಿ ಎಂದು ನಮ್ಮ ಒಕ್ಕೂಟವು ಶುಭ ಹಾರೈಸಿದ್ದಾರೆ.