ಮಾಕುಟ್ಟಕ್ಕೆ ಶಾಸಕ ಪೊನ್ನಣ್ಣ ರವರ ದಿಢೀರ್ ಭೇಟಿ; ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸೂಚನೆ
ವಿರಾಜಪೇಟೆ: ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಂಜಾನೆ ಮಾಕುಟ್ಟ ಭಾಗಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನಿವಾಸಿಗಳೊಡನೆ ಮಾತನಾಡುತ್ತಾ ಅಲ್ಲಿಯ ವಾಸ್ತವಂಶವನ್ನು ಪರಿಶೀಲಿಸಿದ ಮಾನ್ಯ ಶಾಸಕರು, ಅಲ್ಲಿಯ ನಿವಾಸಿಗಳಿಗೆ ಸರಿಯಾದ ಸೂರು ಇಲ್ಲದೆ, ಕೇಂದ್ರ ಬಿಜೆಪಿ ಸರಕಾರ ಅಬ್ಬರದ ಪ್ರಚಾರ ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದಡಿ ಒಂದೇ ಒಂದು ಸೌಚಾಲಯ ಕೂಡ ನಿರ್ಮಿಸದೆ ಇರುವುದನ್ನು ಗಮನಿಸಿದರು.
ಕಡೆಗಣಿಸಲ್ಪಟ್ಟ ಈ ಭಾಗದ ಜನರ ಏಳಿಗೆಗೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಆಧಾರ್ ಕಾರ್ಡ್ ಒದಗಿಸಲು ಈ ಹಿಂದೆ ಶಾಸಕರು ಕ್ರಮ ಕೈಗೊಂಡಿದ್ದರಿಂದ, ಈಗ ಇವರಿಗೆ ಆಧಾರ್ ಕಾರ್ಡ್ ದೊರಕಿದ್ದು ಅದನ್ನು ಮಾನ್ಯ ಶಾಸಕರು ವಿತರಿಸಿದರು.
ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸೂಚನೆ; ಮಾಕುಟ್ಟ ಕಾಲೋನಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಮಕ್ಕಳು ಅಂಗನವಾಡಿ ಕೇಂದ್ರಗಳಿಲ್ಲದೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವುದನ್ನು ಗಮನಿಸಿದ ಮಾನ್ಯ ಶಾಸಕರು, ಅಲ್ಲಿಯೇ ಸ್ಥಳೀಯ ಶಾಲೆಯಲ್ಲಿರುವ ಅಧಿಕ ಕೊಠಡಿಯನ್ನು ಅಂಗನವಾಡಿ ಕೇಂದ್ರವಾಗಿ ಬಳಸುವಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ಅದರ ನಿರ್ಮಾಣಕ್ಕೆ ತನ್ನ ಅನುದಾನದಲ್ಲಿ ಹಣ ಒದಗಿಸುವುದಾಗಿ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದ ಮಾನ್ಯ ಶಾಸಕರು ಕೂಡಲೇ ಈ ಕೇಂದ್ರ ಆರಂಭಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರು ವರ್ಗಿಸ್, ಕೆಡಿಪಿ ಸದಸ್ಯರು ರಫೀಕ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ಬಗರ್ ಹುಕುಂ ಸಲಾಂ, ಜಿಲ್ಲಾ ವಕ್ತರರು ತೆನ್ನಿರ ಮೈನಾ, ಪಕ್ಷದ ಮುಖಂಡರು ಜೋಕಿಮ್, ಮಂಜುನಾಥ್, ಬಟ್ಟಕಳಂಡ ರಾಜ, ರಜಕ್,ಜಾಫರ್, ಬೋಪಣ್ಣ ಕಟ್ಟಿ, ಸಂತೋಷ್, ಅಯೂಬ್, ಸುನಿಲ್, ವಿಜೇಶ್, ಶಿಬು, ಜಾನು, ವಿಮಲಾ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಅಧ್ಯಕ್ಷರು ಪಟ್ಟಡ ರಕ್ಷಿತ್, ಯುವ ಬ್ಲಾಕ್ ಅಧ್ಯಕ್ಷರು ಬಶೀರ್, ಉಪಾಧ್ಯಕ್ಷರು ಸಫನ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.