ಸುಂಟಿಕೊಪ್ಪ;ಅಗ್ನಿ ಅವಘಡಕ್ಕೆ ದಹಿಸಿದ ಇಂಜಿನಿಯರಿಂಗ್ ಮಾರ್ಟ್ ಶಾಪ್

Apr 8, 2026 - 20:39
 0  708
ಸುಂಟಿಕೊಪ್ಪ;ಅಗ್ನಿ ಅವಘಡಕ್ಕೆ ದಹಿಸಿದ ಇಂಜಿನಿಯರಿಂಗ್ ಮಾರ್ಟ್ ಶಾಪ್

ಸುಂಟಿಕೊಪ್ಪ; ಗದ್ದೆಹಳ್ಳದಲ್ಲಿರುವ ಶರತ್ ಎಂಬುವವರ ಹೆಮ್ಮರ ಇಂಜಿನಿಯರಿಂಗ್ ಮಾರ್ಟ್ ಶಾಪ್ ನಲ್ಲಿ ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಅಗ್ನಿಯ ಕೆನ್ನಾಲಿಗೆಗೆ ಮಳಿಗೆ ಧಗ ದಹಿಸಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಅದರ ಒಳಗೆ ಯಾರೂ ಇಲ್ಲದಿದ್ದರಿಂದ ಪ್ರಾಣ ಹಾನಿ ತಪ್ಪಿದೆ.

ಈ ಶಾಪ್ ಗೆ ಬೆಂಕಿ ತಗುಲಿ ಜ್ವಾಲೆ ಹರಡುತ್ತಿರುವುದನ್ನು ಅರಿತ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಿ.ಆರ್. ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ.ಎಂ. ಲತೀಫ್, ವರ್ಕ್ಸ್ ಶಾಪ್ ಮಾಲೀಕರ ಸಂಘದವರು, ಪೊಲೀಸ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟರಲ್ಲದೇ ಕುಶಾಲನಗರ ಮತ್ತು ಮಡಿಕೇರಿ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0