ಸುಂಟಿಕೊಪ್ಪ:ಮಳೆಯಿಂದಾಗಿ ಹಾನಿಯಾದ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ

ಸುಂಟಿಕೊಪ್ಪ:ಮಳೆಯಿಂದಾಗಿ ಹಾನಿಯಾದ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ

ಸುಂಟಿಕೊಪ್ಪ :ಕಳೆದ ವಾರ ಭಾರಿ ಗಾಳಿ ಮಳೆಗೆ ಮರ ಬಿದ್ದು ಹಾನಿಯಾಗಿದ್ದ ಸಮೀಪದ ಕೆಂಚಟ್ಟಿ ನಿವಾಸಿ ಎನ್.ಆರ್.ನಂಜಪ್ಪ ಅವರ ಮನೆಗೆ ಶಾಸಕ ಮಂತರ್ ಗೌಡ ಮತ್ತು ಅಧಿಕಾರಿಗಳು ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯವರಿಗೆ ಸಾಂತ್ವಾನ ಹೇಳಿದರು.

 ಕೆಂಚಟ್ಟಿಯ ಹಾನಿಯಾದ ಸ್ಥಳಕ್ಕೆ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿದ ಶಾಸಕ ಡಾ.ಮಂತರ್‌ಗೌಡ ಅವರು ಎನ್.ಆರ್. ನಂಜಪ್ಪ ಅವರ ಮನೆಯವರಿಗೆ ಸಾಂತ್ವಾನ ಹೇಳಿ ಸರ್ಕಾರದಿಂದ ಪರಿಹಾರ ಮೊತ್ತವನ್ನು ಅದಷ್ಟು ಶೀಘ್ರದಲ್ಲಿ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು

. ಈ ಸಂದರ್ಭ ತಹಶೀಲ್ಧಾರ್ ಕಿರಣ್ ಗೌರಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ರಫೀಕ್‌ಖಾನ್, ಸುಂಟಿಕೊಪ್ಪ ಪಿಎಸ್ ಐ ಮೋಹನ್ ರಾಜ್, ಉಪತಹಶೀಲ್ದಾರ್ ಪ್ರಶಾಂತ್, ಸುಂಟಿಕೊಪ್ಪ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಉಷಾ, ಹಾಗೂ ಸಹಾಯಕಿ ಗೀತಾ, ಗ್ರಾ.ಪಂ.ಕರವಸೂಲಿಗಾರ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮುಖಂಡ ವಿಲಿಯಂ ಮತ್ತಿತರರು ಇದ್ದರು.