ನಾಳೆಯ ಸೋಮವಾರಪೇಟೆ ಬಂದ್ ಗೆ ಬೆಂಬಲ:ಸಾಧನೆಯೇ ಇಲ್ಲದೆ ಕಾಂಗ್ರೆಸ್ ಸಮಾವೇಶ ಜೆಡಿಎಸ್ ವ್ಯಂಗ್ಯ

ನಾಳೆಯ ಸೋಮವಾರಪೇಟೆ ಬಂದ್ ಗೆ ಬೆಂಬಲ:ಸಾಧನೆಯೇ ಇಲ್ಲದೆ ಕಾಂಗ್ರೆಸ್ ಸಮಾವೇಶ ಜೆಡಿಎಸ್ ವ್ಯಂಗ್ಯ

ಸೋಮವಾರಪೇಟೆ:ಪತ್ರಿಕಾ ಭವನದಲ್ಲಿ ಇಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜು, ರೈತರು ಸಂಕಷ್ಟದಲ್ಲಿದ್ದಾರೆ. ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬರುತಿದ್ದ ಜಮೀನು ಸಿ ಅಂಡ್ ಡಿ ಭೂ ವಿವಾದದಿಂದ ಸಾಕಷ್ಟು ಮಂದಿ ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಇದಕ್ಕೆಲ್ಲಾ ಸರ್ಕಾರದ ವಿವಾದಾತ್ಮಕ ಕಾನೂನುಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಪ್ರದೇಶದಲ್ಲಿ ಅಕ್ರಮ,ಸಕ್ರಮ ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಿದ್ದಾರೆ ಆಗ ಸಿ&ಡಿ ಗೆ ಸೇರಿರಲಿಲ್ಲವೇ ಎಂದು ಪ್ರಶ್ನಿಸಿದರು. ಕೃಷಿಮಾಡಲು ಸಿ&ಡಿ ಎನ್ನುವ ಸರ್ಕಾರ ಅದೇ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ನೀಡಲು ಮುಂದಾಗಿದೆ ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು ಗ್ಯಾರೆಂಟಿ ಯೋಜನೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸರ್ಕಾರ ಈ ರೀತಿಯೆಲ್ಲಾ ಹಣ ಸಂಗ್ರಹಿಸಲು ಹೊರಟಿದೆ ಎಂದರು. ಸಾಧನೆಯೇ ಮಾಡದ ಕಾಂಗ್ರೆಸ್ ಎಲ್ಲೆಡೆ ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪ್ರವೀಣ್ ಕುಮಾರ್,ನವೀನ್,ಕಮಲ್ ಹಾಗೂ ವಿಜಯ್ ಉಪಸ್ತಿತರಿದ್ದರು