ನಾಳೆ ಕೊಡವ ತಕ್ಕ್ ಎಳ್ತ್'ಕಾರಡ ಕೂಟದ 197 ಹಾಗೂ 198ನೆ ಪುಸ್ತಕ ಲೋಕಾರ್ಪಣೆ; ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ

Mar 26, 2026 - 11:00
 0  69
ನಾಳೆ ಕೊಡವ ತಕ್ಕ್  ಎಳ್ತ್'ಕಾರಡ ಕೂಟದ 197 ಹಾಗೂ 198ನೆ ಪುಸ್ತಕ ಲೋಕಾರ್ಪಣೆ;  ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮ

ಪೊನ್ನಂಪೇಟೆ;1994ರಿಂದ ಎಡೆಬಿಡದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೊಡವ ಸಾಹಿತ್ಯ ಲೋಕದ ಹಿರಿಯ ಸಂಸ್ಥೆ "ಕೊಡವ ತಕ್ಕ್ ಎಳ್ತ್'ಕಾರಡ ಕೂಟ" ಹಾಗೂ "ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟ"ದ ಜಂಟಿ ಆಶ್ರಯದಲ್ಲಿ ಮಾರ್ಚ್ ತಿಂಗಳ ದಿನಾಂಕ 27ರಂದು(ನಾಳೆ )ಶುಕ್ರವಾರ ಅಪರಾಹ್ನ 2-00 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಿಶೇಷ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

 ಈ ಸಂದರ್ಭ 'ಕೂಟ'ದ 'ಜನಪ್ರಿಯ ಕೊಡವ ಸಾಹಿತ್ಯ ಮಾಲೆ' ಯೋಜನೆಯ 197 ಹಾಗೂ 198ನೆ ಹೆಜ್ಜೆಯ ಎರಡು ನೂತನ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಇದರೊಂದಿಗೆ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು ಹಾಗೂ ಕೊಡವ ಭಾಷೆಯಲ್ಲಿ ಹಾಸ್ಯ ಸ್ಪರ್ಧೆ ನಡೆಸಲಾಗುವುದು. ವಿಜೇತರಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತ್ರತೀಯ ಬಹುಮಾನ ನೀಡಲಾಗುವುದು.

 ಕೊಡವ ತಕ್ಕ್ ಎಳ್ತ್'ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಪುಸ್ತಕ ಪ್ರಕಟಣೆಯ ದಾನಿಗಳಾದ ಅಂಜಪರವಂಡ ಸನ್ನಿ ತಮ್ಮಯ್ಯ, ಮಲ್ಲಮಡ ಶ್ಯಾಮಲ ಸುನಿಲ್, ಪೊನ್ನೋಲತಂಡ ಕೆ. ಸೋಮಣ್ಣ, 197ನೆ ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ, 198ನೆ ಪುಸ್ತಕದ ಲೇಖಕಿ ನೂರೇರ ಸರಿತ ಉತ್ತಯ್ಯ ಭಾಗವಹಿಸಲಿದ್ದಾರೆ.

 ಜಾತಿ,ಧರ್ಮದ ನಿರ್ಭಂದವಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸಬಹುದಾದ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು 'ಕೂಟ'ಗಳ ಪ್ರಕಟಣೆಯಲ್ಲಿ ಕೋರಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0