ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡ ಗೋಣಿಕೊಪ್ಪಲು ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ಆರ್ ಮುಧೋಳ್

ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡ ಗೋಣಿಕೊಪ್ಪಲು ವೃತ್ತದ ಪೊಲೀಸ್ ಇನ್ಸ್ಪೆಕ್ಟರ್   ಶಿವರಾಜ್ ಆರ್ ಮುಧೋಳ್

ಬೆಂಗಳೂರು; ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪದಕವನ್ನು ಇಂದು ವಿತರಿಸಿದರು. ವಿಶೇಷ ತನಿಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದನ್ನು ಪರಿಗಣಿಸಿ ಈ ವಿಶೇಷ ಚಿನ್ನದ ಪದಕವನ್ನು ನೀಡಲಾಗುತ್ತಿದೆ. ಏಪ್ರಿಲ್ ೨ ರಂದು ಬೆಂಗಳೂರು ನಡೆಯುವ ಸಮಾರಂಭದಲ್ಲಿ ಈ ಪದಕದ ಪ್ರಧಾನ ನಡೆಯಲಿದೆ. ಕೊಳ್ಳೆಗಾಲದಲ್ಲಿ ನಡೆದ ಕೊಲೆ ಪ್ರಕರಣ, ಕೊಡಗಿನ ಬೇಗೂರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ತನಿಖೆ, ದರೋಡೆ, ಚಿನ್ನಾಭರಣ ಕಳ್ಳತನ ಸೇರಿದಂತೆ ಹಲವಾರು ಅಪರಾಧ ಘಟನೆಗೆ ಸಂಬಂಧಿಸಿದಂತೆ ಅತ್ಯುತ್ತಮ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ಯಶಸ್ವಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಗೋಣಿಕೊಪ್ಪದಲ್ಲಿ ವೃತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಗುಲ್ಬರ್ಗ, ಹುಬ್ಬಳಿ, ಕೆ.ಜಿ.ಎಫ್ ಜಿಲ್ಲೆಗಳಲ್ಲಿ ಉಪ ನಿರೀಕ್ಷಕರಾಗಿ, ಹಾಸನ ಮತ್ತು ಚಾಮರಾಜನಗರದಲ್ಲಿ ವೃತ್ತ ನಿರೀಕ್ಷಕರಾಗಿ ೨೩ ವರ್ಷಗಳಿಂದ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿರುವ ಇವರು ರಾಮಚಂದ್ರಪ್ಪ ಹಾಗೂ ಮಂಗಳಬಾಯಿ ಅವರ ಪುತ್ರರಾಗಿದ್ದಾರೆ.