ದೇಶದ ಜನತೆಯ ಸ್ವಾಸ್ಥ್ಯ ಕಾಪಾಡಲು ಸಂವಿಧಾನ ಮುಖ್ಯ;ಶಾಸಕ ಎಎಸ್ ಪೊನ್ನಣ್ಣ

Apr 15, 2026 - 07:34
 0  99
ದೇಶದ ಜನತೆಯ ಸ್ವಾಸ್ಥ್ಯ ಕಾಪಾಡಲು ಸಂವಿಧಾನ ಮುಖ್ಯ;ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ;ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯ ಅಂಗವಾಗಿ, ಲೆಜೆಂಡ್ಸ್ ಕ್ಲಬ್ ಚೆನ್ನಯ್ಯನ ಕೋಟೆ ಇವರು ಆಯೋಜಿಸಿದ, ವಾಲಿಬಾಲ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

 ಚೆನ್ನಯ್ಯನ ಕೋಟೆಯ ಶಾಲಾ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿಯು ಆಯೋಜನೆಗೊಂಡಿತ್ತು. ಮೊದಲಿಗೆ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕರು, ಕ್ರೀಡೆಯು ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ಥೈರ್ಯತೆಯನ್ನು ಕಾಪಾಡಲು ಬಹು ಮುಖ್ಯವಾಗಿದೆ. ಅಂತೆಯೇ ಕ್ರೀಡೆಯನ್ನು ಎಲ್ಲರೂ ಆಸ್ವಾದಿಸುತ್ತಾ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಆಶಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಕಿವಿಮಾತು ಹೇಳಿದರು.

ಇಂದಿನ ಸಮ ಸಮಾಜದ ಪರಿಕಲ್ಪನೆ ಡಾ. ಬಿ.ಆರ್ ಅಂಬೇಡ್ಕರ್ ರವರು ಗ್ರಹಿಸಿ ಸಂವಿಧಾನವನ್ನು ರಚಿಸಿದರು. ಇಂದಿನ ಯುಗದಲ್ಲಿ, ಭಾರತೀಯ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ.

 ಒಬ್ಬ ಮನುಷ್ಯನ ಸ್ವಾಸ್ಥ್ಯ ಕಾಪಾಡಲು ಕ್ರೀಡೆ ಎಷ್ಟು ಮುಖ್ಯವೋ, ದೇಶದ ಹಾಗೂ ದೇಶದ ಜನತೆಯ ಸ್ವಾಸ್ಥ್ಯ ಕಾಪಾಡಲು ಸಂವಿಧಾನವೂ ಅಷ್ಟೇ ಮುಖ್ಯವಾಗಿದೆ. ಆದುದರಿಂದ ಎಲ್ಲರೂ ಸಂವಿಧಾನವನ್ನು ಗೌರವಿಸಿ ಅದರಂತೆ ನಡೆದುಕೊಳ್ಳಬೇಕೆಂದು ಹೇಳುತ್ತಾ, ವಾಲಿಬಾಲ್ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಲೆಜೆಂಡ್ಸ್ ಕ್ಲಬ್ ಚೆನ್ನಯ್ಯನಕೋಟೆ ಇದರ ಅಧ್ಯಕ್ಷರು ವಿಜು, ಕಾರ್ಯದರ್ಶಿ ರವೀಂದ್ರ ಭಾವೆ, ಮನು, ಶಬೀರ್, ಪಕ್ಷದ ಪ್ರಮುಖರು ಅಜ್ಜಿಕುಟ್ಟಿರ ಪೊನ್ನು, ಮಂಡೆಟೀರ ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ಚೆಕ್ಕು, ಅನಿಲ್, ಆಪ್ರು ರವೀಂದ್ರ, ಕೋಳುಮಂಡ ರಫೀಕ್, ಸಿದ್ದಪ್ಪ, ಯುವ ಕಾಂಗ್ರೆಸ್ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಸೂಸಾ, ದಿಲ್ಲು, ನಜಿರ್, ಗಣೇಶ್, ವಿಶ್ವ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0