ಮಲಯಾಳಿ ಸಮುದಾಯದವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನಮ್ಮ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ: ಶಾಸಕ ಎ.ಎಸ್ ಪೊನ್ನಣ್ಣ ಅಭಿಪ್ರಾಯ
ವಿರಾಜಪೇಟೆ:ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ವಿರಾಜಪೇಟೆ ಇವರ ವತಿಯಿಂದ ಆಯೋಜನೆಗೊಂಡ ಓಣಂ ಹಬ್ಬಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.
ವಿರಾಜಪೇಟೆಯ ಮುತ್ತಪ್ಪನ್ ಕಲಾಮಂಟಪದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ವಿಶಿಷ್ಟ ಹಾಗೂ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಮಲಯಾಳಿ ಸಮಾಜದವರು ಓಣಂ ಹಬ್ಬದ ಮೂಲಕ ನಾಡಿಗೆ ಸುಖ ಶಾಂತಿಯ ಸಂದೇಶವನ್ನು ಸಾರುತ್ತಾರೆ.
ಪೌರಾಣಿಕ ಬಲಿಚಕ್ರವರ್ತಿಯ ಆಗಮಗದ ಸಂಭ್ರಮಾಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಈ ಹಬ್ಬವು, ಪರಸ್ಪರ ಸಾಮರಸ್ಯದಿಂದ ಬದುಕುವ ಸಂದೇಶ ಸಾರುವುದರೊಂದಿಗೆ ಸಮಾಜಕ್ಕೆ ವಿಶಿಷ್ಟ ಪರಂಪರೆಯನ್ನು ಪರಿಚಯಿಸುತ್ತದೆ ಎಂದು ಬಣ್ಣಿಸಿದರು. ಮಲಯಾಳಿ ಸಮುದಾಯದವರ ಕೊಡುಗೆಯನ್ನು ಸ್ಮರಿಸಿದ ಮಾನ್ಯ ಶಾಸಕರು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ನಮ್ಮ ನಾಡಿಗೆ ಇವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷರು ಮದಂಡ ತಿಮ್ಮಯ್ಯ, ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರು ಶಬರಿಷ್, ದಿನೇಶ್, ಮತೀನ್, ಹಮೀದ್, ಜಲಿಲ್, ಶಿಬಾ ಪೃಥ್ವಿನಾಥ್, ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷರು ಸುಮೇಶ್, ಪದಾಧಿಕಾರಿಗಳು, ಪಕ್ಷದ ಪ್ರಮುಖರು ಕುಂಡಚೀರ ಮಂಜು ದೇವಯ್ಯ, ಸಂತೋಷ್,ಮಂಜುನಾಥ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.