ಸಂಭ್ರಮದಿಂದ ಜರುಗಿದ ನರಿಯಂದಡ ಶ್ರೀಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದ ವಾರ್ಷಿಕ ಉತ್ಸವ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ನರಿಯಂದಡ ಗ್ರಾಮದ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ವರ್ಷಂ ಪ್ರತಿ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮ ಶ್ರದ್ದಾ ಭಕ್ತಿಯಿಂದ ನಡೆಯಿತು.
ಉತ್ಸವದ ಅಂಗವಾಗಿ ದೇವಾಲಯದಲ್ಲಿ ಮಹಾ ಗಣಪತಿ ಹೋಮ,ಪ್ರಸಾದ ವಿತರಣೆ,ಮಧ್ಯಾಹ್ನ ಮಹಾ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ ಸಂಜೆ ಚೆಯ್ಯಂಡ ಕುಟುಂಬದಿಂದ ಭಂಡಾರ ಆಗಮಿಸುವ ಸಂಪ್ರದಾಯ,ಕೊಡಿ ಮರ ನಿಲ್ಲುವುದು,ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು,ದೀಪಾರಾಧನೆ ,ನಂತರ ಮಹಾಪೂಜೆ ಇರು ಬೆಳಕು (ದೇವರು ಹೊರಗೆ ಬರುವುದು,) ಚಂಡಿಕಾ ಹೋಮ,ತೀರ್ಥ ಪ್ರಸಾದ,ನೆರಪು ಬಲಿ,ದೇವರ ನೃತ್ಯ,ಅಲಂಕಾರ ಪೂಜೆ, ಶ್ರೀ ಭಗವತಿ ದೇವರ ಅವವೃತ ಸ್ನಾನ(ಹೊಳೆಗೆ ಹೋಗುವುದು,) ದೇವರ ನೃತ್ಯ,ವಸಂತ,ವಿಷ್ಣುಮೂರ್ತಿ ಮೇಲೇರಿಗೆ ಸೌದೆ ಕಡಿಯುವುದು,ಭಗವತಿ ದೇವರ ಸನ್ನಿಧಿಯಲ್ಲಿ ಕಳಶ,ಕ್ಷೇತ್ರಪಾಲ ಸನ್ನಿಧಿಯಲ್ಲಿ ಕ್ಷೇತ್ರಪಾಲ ಕೋಲ, ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲವು,ವಿಷ್ಣು ಮೂರ್ತಿ ಕೋಲವು ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ)ವಿತರಣೆ ಈಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ಈ ಬಾರಿ ರಘು ಮಾಯಮುಡಿ ನೇತೃತ್ವದ ಚಂಡೆ ವಾಧ್ಯ ತಂಡದವರಿಂದ ಚಂಡೆ ಮೇಳ,ಕಿಶನ್ ರವರ ನೇತೃತ್ವದಲ್ಲಿ ವಿಷ್ಣುಮೂರ್ತಿ ಕೋಲ ನಡೆಯಿತು.
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವಿರಾಜಪೇಟೆಯ ಪುಂಡರೀಶ,ವೆಂಕಟೇಶ ಹಾಗೂ ಪ್ರಧಾನ ಅರ್ಚಕರಾದ ಶಿವಶರ್ಮ ವಹಿಸಿದರು. ಇದೆ ಸಂದರ್ಭ ಕಳೆದ 3 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಟ್ಟಿಯಂಡ ಜಯರಾಂ ಅವರನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಿ,ಗೌರವಿಸಲಾಯಿತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮಂಞಪುರ ಛಾಯಾ ಪ್ರಕಾಶ್,ಉಪಾಧ್ಯಕ್ಷರುಗಳಾದ ಬೆಳಿಯಂಡ್ರ ಹರಿಪ್ರಸಾದ್, ಚೆಯ್ಯಂಡ ಶಂಕರಿ (ಶಾನ್), ಕಾರ್ಯದರ್ಶಿ ಮಕ್ಕಿಮನೆ ಸುಧೀರ್,ಆಡಳಿತ ಮಂಡಳಿಯ ಪದಾಧಿಕಾರಿಗಳು,ಭಕ್ತಾಧಿಗಳು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
What's Your Reaction?
Like
1
Dislike
1
Love
0
Funny
0
Angry
0
Sad
0
Wow
0
