ಒಕ್ಕಲಿಗ ಬಾಂಧವರಲ್ಲಿ ಒಕ್ಕಲಿಗ ಎಂಬ ಭಾವನೆ ಇದ್ದಲ್ಲಿ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ;ಕೆ.ಕೆ‌ ಮೋಹನ್ ಕುಮಾರ್ ; ಕಣ್ಣಂಗಾಲ ಒಕ್ಕಲಿಗರ ಸಂಘದ ವಿವಿಧ ಕ್ರೀಡಾಕೂಟಕ್ಕೆ ಚಾಲನೆ

Apr 19, 2026 - 14:43
Apr 19, 2026 - 14:43
 0  209
ಒಕ್ಕಲಿಗ ಬಾಂಧವರಲ್ಲಿ ಒಕ್ಕಲಿಗ ಎಂಬ ಭಾವನೆ ಇದ್ದಲ್ಲಿ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ;ಕೆ.ಕೆ‌ ಮೋಹನ್ ಕುಮಾರ್  ;  ಕಣ್ಣಂಗಾಲ ಒಕ್ಕಲಿಗರ ಸಂಘದ ವಿವಿಧ ಕ್ರೀಡಾಕೂಟಕ್ಕೆ ಚಾಲನೆ

ಕಣ್ಣಂಗಾಲ;ಒಕ್ಕಲಿಗ ಬಾಂಧವರಲ್ಲಿ ನಾವು ಒಕ್ಕಲಿಗರು ಎಂಬ ಭಾವನೆ ಇದ್ದಲ್ಲಿ ಮಾತ್ರ ಒಕ್ಕಲಿಗ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಹೊಳೆನರಸೀಪುರ ಚೆಸ್ಕಾಂ ಅಭಿಯಂತರಾದ ಕೆ.ಕೆ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.

ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಯುಗಾದಿ ಪ್ರಯುಕ್ತ ಅಮ್ಮತ್ತಿ ಒಂಟಿಯಂಗಡಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಕ್ಕಲಿಗರು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಎಚ್.ಡಿ ದೇವೇಗೌಡ ಅವರು ದೇಶದ ಪ್ರಧಾನಿಯಾಗಿದ್ದರು. ಅವರು ಒಕ್ಕಲಿಗ ಜನಾಂಗದವರು ಎಂಬುದು ನಮ್ಮ ಹೆಮ್ಮೆಯಾಗಿದೆ. ನಮ್ಮೊಳಗೆ ನಾನು ಒಕ್ಕಲಿಗ ಎಂಬ ಭಾವನೆ ಮೂಡಿದಲ್ಲಿ ಮಾತ್ರ ಜನಾಂಗದ ಸರ್ವತೋಮುಖ ಅಭಿವೃದ್ಧಿ‌ ಸಾಧ್ಯ ಎಂದು ಕೆ.ಕೆ ಮೋಹನ್ ಕುಮಾರ್ ಅವರು ಹೇಳಿದರು.

ಕಣ್ಣಂಗಾಲ ಒಕ್ಕಲಿಗರ ಸಂಘವು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಯಾವುದೇ ಸಂಘಗಳು ಗಟ್ಟಿಯಾಗಿ ನಿಲ್ಲಬೇಕೆಂದರೆ ನಮ್ಮಲ್ಲಿ ಒಗ್ಗಟ್ಟಿರಬೇಕು. ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯಬಾರದಾಗೆ ಎಲ್ಲರೂ ಕಾರ್ಯನಿರ್ವಹಿಸಬೇಕೆಂದು ಕೆ.ಕೆ ಮೋಹನ್ ಕುಮಾರ್ ಕರೆ ನೀಡಿದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದ ವಿರಾಜಪೇಟೆ ತಾಲ್ಲೂಕು ಸಂಘದ ವ್ಯವಸ್ಥಾಪಕಿ ಕೆ.ಆರ್ ಸ್ವರೂಪ ಗೆಲುವು-ಸೋಲು ಒಂದೇ ನಾಣ್ಯದ ಎರಡು‌ ಮುಖಗಳು ಇದ್ದಂತೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಶಕ್ತಿ ಕ್ರೀಡಾಪಟುಗಳಲ್ಲಿ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಸೋಲು ಕಂಡಂತಹ ತಂಡಗಳು ಅತಿರೇಕದ ವರ್ತನೆಯಿಂದಾಗಿ ಇಡೀ ಕಾರ್ಯಕ್ರಮಕ್ಕೆ ಚ್ಯುತಿ ಬರುವಾಗೆ ನಡೆದುಕೊಂಡಿರುವ ಹಲವಾರು ಘಟನೆಗಳು ನಮ್ಮ ಮುಂದಿದೆ. ಆದ್ದರಿಂದ ಕ್ರೀಡಾ ಮನೋಭಾವದಿಂದ ಎಲ್ಲರೂ ಪಾಲ್ಗೊಂಡು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕೆ.ಆರ್ ಸ್ವರೂಪ ಅವರು ಕಿವಿ ಮಾತು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಸಂಘದ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ಅವರು,ಯುಗಾದಿ ಹಬ್ಬದ ಪ್ರಯುಕ್ತ ಕಳೆದ ಎರಡು ವರ್ಷಗಳಿಂದ ಒಕ್ಕಲಿಗ ಕುಲಬಾಂಧವರಿಗಾಗಿ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗಲಿಲ್ಲ.ಆದರೆ ಈ ವರ್ಷ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ. ಒಕ್ಕಲಿಗ ಜನಾಂಗದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿ‌ ನಿಲ್ಲಲು ಎಲ್ಲರೂ ಸನ್ನದ್ದರಾಗಬೇಕೆಂದು ಅವರು ಹೇಳಿದರು.

 ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್,ಪಾಸಿಂಗ್ ದಿ ಬಾಲ್, ಬಾಲಕ ಮತ್ತು ಬಾಲಕಿಯರಿಗೆ ನೂರು ಮೀಟರ್ ಓಟ ಹಾಗೂ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಸಮೃದ್ಧಿ ಹಾಗೂ ಹಿಮಾನ್ಸಿ ನೆರವೇರಿಸಿದರು. ಸಂಘದ ಕಾರ್ಯದರ್ಶಿ ವಿ.ವಿ ಮಹಾಲಕ್ಷ್ಮಿ ಸ್ವಾಗತಿಸಿ,ಸಾಮಾಜಿಕ ಜಾಲತಾಣದ ಸಂಯೋಜಕಿ ಪಂಚಮಿ ಅಭಿಶೇಕ್ ವಂದಿಸಿದರು. ಈ ಸಂದರ್ಭ ವೇದಿಕೆಯಲ್ಲಿ, ಉಪಾಧ್ಯಕ್ಷರಾದ ವಿ. ಜಿ. ಪಾರ್ಥ, ಖಜಾಂಜಿ ವಿ. ಬಿ. ಮಧು,ನಿರ್ದೇಶಕರಾದ ಕೆ. ಪಿ. ಅಜಿತ್, ವಿ. ಪಿ. ಜೀವನ್ ಕುಮಾರ್ ವಿ.ಟಿ‌ ರಾಕೇಶ್, ವಿ. ಸಿ. ಕಿರಣ್,ವಿ. ಕೆ. ರಂಜು, ಸೌಮ್ಯ ಸಂಪತ್,ನಮೃತ ಗೌರಿಶಂಕರ್, ವಿ.ಎಂ. ದಿನೇಶ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0