ಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ(ಸಿಸಿಆರ್‌ಐ) ಡಿ.20ರಿಂದ 22ರವರೆಗೆ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ

Dec 15, 2025 - 14:51
Dec 15, 2025 - 19:00
 0  116
ಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ(ಸಿಸಿಆರ್‌ಐ) ಡಿ.20ರಿಂದ 22ರವರೆಗೆ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ

ಮಡಿಕೇರಿ: ಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ(ಸಿಸಿಆರ್‌ಐ) ಡಿ.20ರಿಂದ 22ರವರೆಗೆ ನಡೆಯಲಿರುವ ಸಂಸ್ಥೆ ಶತಮಾನೋತ್ಸವ ಕಾರ್ಯಕ್ರಮವನ್ನು ಕಾಫಿ ಬೆಳೆಗಾರರು, ಉದ್ಯಮಿಗಳು, ಸಾರ್ವಜನಿಕರು ಹಾಗೂ ಕಾಫಿ ಪ್ರಿಯರು, ಬೆಳೆಯ ಅವಲಂಬಿತರು ಯಶಸ್ವಿಗೊಳಿಸುವಂತೆ ಕಾಫಿ ಬೋರ್ಡ್ ಸದಸ್ಯ ತಳೂರು ಕಿಶೋರ್ ಕುಮಾರ್ ಮನವಿ ಮಾಡಿದರು.

ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಕಾಫಿ ಸಂಶೋಧನಾ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ. ತಮಿಳುನಾಡು, ಆಂದ್ರಪ್ರದೇಶ, ಅಸ್ಸಾಂ ಮುಂತಾದ ಕಡೆಗಳಲ್ಲಿ ಕೇಂದ್ರಗಳಿದ್ದು ಅಲ್ಲಿನ ಕಾಫಿ ಬೆಳೆ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧೆಡೆಗಳಲ್ಲಿ ವಿಸ್ತರಣಾ ವಿಭಾಗಗಳನ್ನು ಸಹ ಆರಂಭಿಸಲಾಗಿದೆ. ಬೇರೆ ಯಾವುದೇ ಸಂಸ್ಥೆಗಳಿಗಿAತ ಬಲಯುತವಾದ ಜಾಲಬಂಧವನ್ನು ಕಾಫಿ ಮಂಡಳಿ ಹೊಂದಿದೆ.

ದೇಶಾದ್ಯಂತ 16 ತಾಂತ್ರಿಕ ಅಭಿವೃದ್ಧಿ ಕೇಂದ್ರಗಳನ್ನು ಸಹ ಸಂಸ್ಥೆ ಹೊಂದಿದೆ.ದೇಶಾದ್ಯAತ 4 ಲಕ್ಷ ಕಾಫಿ ಬೆಳೆಗಾರರಿದ್ದು, 10 ಲಕ್ಷ ಕುಟುಂಬಗಳು ಕಾಫಿ ಅವಲಂಭಿತವಾಗಿ ಜೀವನ ನಡೆಸುತ್ತಿವೆ. ನಮ್ಮಲ್ಲಿ ಉತ್ಪಾದನೆಯಾಗುವ ಶೇ.80ರಷ್ಟು ಕಾಫಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಪ್ತು ಮಾಡಲಾಗುತ್ತಿದೆ. 7 ಚಿನ್ನದ ಕಾಫಿ ಬೀಜಗಳಿಂದ ಆರಂಭಗೊಂಡ ಭಾರತದ ಕಾಫಿಯನ್ನು 7 ಲಕ್ಷ ಟನ್‌ಗೆ ತಲುಪಿಸಬೇಕು ಎಂಬುದು ನಮ್ಮ ಗುರಿ. ಕಾಫಿ ಉದ್ಯಮಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಸಂಶೋಧನಾ ಕೇಂದ್ರ 100 ವರ್ಷ ತುಂಬಿರುವುದು ಕೇವಲ ಲೆಕ್ಕ ಮಾತ್ರವಲ್ಲ. ಇದು ಭಾರತೀಯರೆಲ್ಲರ ಕನಸು ನನಸಾಗಿ ಕೈಗೆ ಬಂದಿರುವ ದಿನವಾಗಿದೆ. ಇದನ್ನು ನಾವು ಕೇವಲ ಆಚರಣೆಗೆ ಸೀಮಿತ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಜಾತ್ರೆಯಂತೆ ಸಂಭ್ರಮಿಸಬೇಕಿದೆ ಎಂದರು.

ಶತಮಾನೋತ್ಸವದ ಅಂಗವಾಗಿ ವಿವಿಧ ಯಂತ್ರೋಪಕರಣಗಳನ್ನು ಪ್ರದರ್ಶನ ಮಾಡಲಾಗುವುದು. ಮೂರು ದಿನಗಳ ಕಾಲ 10ಕ್ಕೂ ಅಧಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವಾರು ವಿಜ್ಞಾನಿಗಳು, ನುರಿತ ಬೆಳೆಗಾರರು, ಸಂಶೋಧಕರು ಆಗಮಿಸಿ ಬೆಳೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಪ್ರಲ್ಹಾದ್ ಜೋಷಿ, ರಾಜ್ಯದ ವಿವಿಧ ಸಚಿವರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ದೇಶದ 100 ಕಾಫಿ ಬೆಳೆಗಾರರಿಗೆ ಸನ್ಮಾನ ಮತ್ತು ಅವರ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುವುದು.

ಜಿಲ್ಲೆಯ ಬೋಸ್ ಮಂದಣ್ಣ, ಸಾಕಮ್ಮ, ಮಂಜುನಾಥ, ಅಪ್ಪಯ್ಯ, ಡಾಲಿ ಚಂಗಪ್ಪ, ಬೊಳೇರ ಚಂಗಪ್ಪ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಕೊಡಗಿನ ಕಾಫಿ ಬೆಳೆಗಾರರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾಫಿ ಬೋರ್ಡ್ನ ಪ್ರಮುಖರಾದ ಎಂ.ಸಜೀನಾ, ಸನೀಶ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0