ನೆಲ್ಲಿಹುದಿಕೇರಿಯ ಯುವಕ ನಾಪತ್ತೆಯಾಗಿ ಹತ್ತು ತಿಂಗಳು ಕಳೆದರೂ ಪತ್ತೆಯಿಲ್ಲ; ಕೇರಳದ ಟೆಕ್ಕಿ ಶರಣ್ಯಳ ಪತ್ತೆಗಾಗಿ ತೋರಿದ ಆಸಕ್ತಿ ಗಂಗಾಧರನಿಗಿಲ್ವೇ!
ಸಿದ್ದಾಪುರ : ಕೇರಳದಿಂದ ಚಾರಣಕ್ಕೆಂದು ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ ಶರಣ್ಯ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ಶೋಧ ಕಾರ್ಯ ನಡೆಸಿ ಪತ್ತೆಹಚ್ಚಿರುವ ಪೊಲೀಸ್ ಇಲಾಖೆಯು ಕಳೆದ ಜೂನ್ 27 ರಂದು ಕೆಲಸಕ್ಕೆ ತೆರಳಿದ ಗಂಗಾಧರ ಎಂಬ ಯುವಕ ನಾಪತ್ತೆಯಾಗಿ ತಿಂಗಳುಗಳು ಕಳೆದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಪೊಲೀಸ್ ಇಲಾಖೆಯ ವಿರುದ್ದ ನಾಪತ್ತೆಯಾದ ಯುವಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ : ನೆಲ್ಯಹುದಿಕೇರಿ ಗ್ರಾಮದ ಎಂ ಜಿ ಕಾಲೋನಿ ನಿವಾಸಿ ಗಂಗಾಧರ(32)ಎಂಬಾತ ಗ್ರಾಮದ ನಾಲ್ವರೊಂದಿಗೆ ಮಡಿಕೇರಿ ತಾಲೂಕಿನ ಅರಂದೂರಿನ ಖಾಸಗಿ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದನು. ತೋಟದ ಲೈನ್ ಮನೆಯಲ್ಲಿ ಮಲಗಿದ್ದ ಗಂಗಾಧರ ಜೂನ್ 27 ರಂದು ಮದ್ಯರಾತ್ರಿ ಮೂತ್ರ ವಿಸರ್ಜನೆಗೆಂದು ವಾಸದ ಲೈನ್ ಮನೆಯ ಹೊರಗಿನ ಶೌಚಾಲಯಕ್ಕೆ ತೆರಳಿದನಂತರ ಹಿಂತಿರುಗಲಿಲ್ಲ ಎಂದು ಜೊತೆಯಲ್ಲಿದ್ದ ಕಾರ್ಮಿಕರು ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು.
ಕುಟುಂಬಸ್ಥರು ನೀಡಿದ ದೂರಿನನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನಾಪತ್ತೆಯಾದ ಯುವಕನ ಪರಿಚಯಸ್ಥರು ಸೇರಿ ಕಾಣೆಯಾದ ಜಾಗದಲ್ಲಿ ಹುಡುಕಾಡು ಯುವಕನ ಪತ್ತೆಗೆ ಶ್ರಮಿಸದರು.
ಈ ಸಂಧರ್ಭದಲ್ಲಿ ನಾಪತ್ತೆಯಾದ ಯುವಕನ ಅಂಗಿ ಲೈನ್ ಮನೆಯಿಂದ ಅಲ್ಪದೂರದಲ್ಲಿ ಪತ್ತೆಯಾಗಿತ್ತು. ಸಂಪೂರ್ಣ ಕಾಫಿ ತೋಟದಲ್ಲಿ ಹುಡುಕಿದರೂ ಯುವಕನ ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂತಿರುಗಿದರು.
ಕಾಣೆಯಾದ ಮಗ ಬರಬಹುದೆಂಬ ಆಸೆಯಿಂದ ಗಂಗಾಧರನ ವೃದ್ದೆ ತಾಯಿ ಕಣ್ಣೀರಿನಲ್ಲಿ ಒಬ್ಬಂಟಿಯಾಗಿ ಮಗನಬರುವಿಕೆಗೆ ಕಾದು ಕುಳಿತಿರುವದೃಶ್ಯ ಕಂಡುಬರುತ್ತಿದೆ. ಇತ್ತ ಕಾಣೆಯಾದ ಕೇರಳದ ಟೆಕ್ಕಿಯ ಪತ್ತೆಗೆ ಶ್ರಮಿಸಿದ ಒಂದು ಶೇಕಡಾ ಕಾಣೆಯಾದ ಗಂಗಾಧರನ ಪತ್ತಗೆ ಶ್ರಮಿಸಿದರೆ ಪ್ರಕರಣ ಭೇದಿಸಬಹುದೆಂಬೂದು ಗ್ರಾಮಸ್ಥರ ಅಭಿಪ್ರಾಯ.
