Kodagu

2026ರ ಹಿಂಗಾರು ಮಳೆಯಲ್ಲೂ ಕೊರತೆ ಸಾಧ್ಯತೆ: ಭೂವಿಜ್ಞಾನಿ ಪ್ರಕಾಶ್ ಎಚ್ಚರಿಕೆ

admincoorgdaily

2026ರ ಹಿಂಗಾರು ಮಳೆಯಲ್ಲೂ ಕೊರತೆ ಸಾಧ್ಯತೆ: ಭೂವಿಜ್ಞಾನಿ ಪ್ರಕಾಶ್ ಎಚ್ಚರಿಕೆ

ಬೆಂಗಳೂರು, ಜೂನ್ 28: 2026ರ ಮುಂಗಾರು ಮಳೆಯಲ್ಲಿ ಕಂಡುಬಂದ ಕೊರತೆ ಹಿಂಗಾರು ಅವಧಿಯ ಅಕ್ಟೋಬರ್-ಡಿಸೆಂಬರ್ ತಿಂಗಳುಗಳಲ್ಲೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿ ಹೆಚ್.ಎಸ್.ಎಂ. ಪ್ರಕಾಶ್ ಎಚ್ಚರಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, "ಜಿಯೋಮೆಟಿಯೋರಾಲಜಿ ಅಧ್ಯಯನದ ಪ್ರಕಾರ ಭಾರತದ ಸುತ್ತಮುತ್ತ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ಜ್ವಾಲಾಮುಖಿ ಚಟುವಟಿಕೆಗಳು ತೀವ್ರ ಇಳಿಮುಖವಾಗಿವೆ. ಮುಂದಿನ ಆರು ತಿಂಗಳ ಮುನ್ಸೂಚನಾ ವರದಿಗಳ ಅಧ್ಯಯನದಿಂದ ಇದೇ ಪರಿಸ್ಥಿತಿ ಮುಂದುವರಿದು ಮತ್ತಷ್ಟು ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

"ಎಲ್ ನಿನೋ ಪರಿಸ್ಥಿತಿಗೂ ಸಮುದ್ರದೊಳಗಿನ ಜ್ವಾಲಾಮುಖಿಗಳು ಕಾರಣ ಎನ್ನುವುದನ್ನು ವಿಜ್ಞಾನಿಗಳು ಗಮನಿಸಬೇಕು. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಪ್ರಕಾಶ್ ಕೋರಿದ್ದಾರೆ.