ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಯಲು ಸರ್ಕಾರ ವಿಫಲವಾದರೆ ತೀವ್ರ ಹೋರಾಟ

ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಯಲು ಸರ್ಕಾರ ವಿಫಲವಾದರೆ ತೀವ್ರ ಹೋರಾಟ

ಮಡಿಕೇರಿ: ರಸಗೊಬ್ಬರ ಪೂರೈಕೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಯಲು ಸರ್ಕಾರ ವಿಫಲವಾದರೆ ತೀವ್ರ ಹೋರಾಟ ನಡೆಸುವುದಾಗಿ KRS ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ ಎಚ್ಚರಿಸಿದ್ದಾರೆ.

ಯೂರಿಯಾ MRP ₹266.5 ಇದ್ದರೂ ₹320ರಿಂದ ₹600ಕ್ಕೆ, ಡಿಎಪಿ ₹1,350 ಇದ್ದರೂ ₹2,100ರವರೆಗೆ ಮಾರಾಟವಾಗುತ್ತಿದೆ. ಲಿಂಕ್ ಪ್ರಾಡಕ್ಟ್ ಹೆಸರಲ್ಲಿ ₹500-₹800 ಮೌಲ್ಯದ ಅನಗತ್ಯ ಗೊಬ್ಬರವನ್ನು ಬಲವಂತವಾಗಿ ಕೊಡಿಸುತ್ತಿದ್ದಾರೆ. ಕೃಷಿ ಅಧಿಕಾರಿಗಳ ಎದುರೇ ಅಕ್ರಮ ನಡೆದರೂ ಕ್ರಮ ಇಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಪ್ರಭು ಸ್ವಾಮಿ, ಕುಂದಳ್ಳಿ ಮಹೇಶ್, ಪ್ರಮುಖರಾದ ಶೇಖರ್ ಕುಮಾರ್, ಸತೀಶ್ ಕುಮಾರ್ ಇದ್ದರು.