Kodagu

ಅಭ್ಯತ್ ಮಂಗಲದಲ್ಲಿ ಚಾಲಕನ ನಿಯಂತ್ರಣ ತಪ್ಪಿ‌ ತೋಟಕ್ಕೆ ನುಗ್ಗಿದ ಕಾರು:ಇಬ್ಬರಿಗೆ ಗಂಭೀರ ಗಾಯ

admincoorgdaily

ಅಭ್ಯತ್ ಮಂಗಲದಲ್ಲಿ ಚಾಲಕನ ನಿಯಂತ್ರಣ ತಪ್ಪಿ‌ ತೋಟಕ್ಕೆ ನುಗ್ಗಿದ ಕಾರು:ಇಬ್ಬರಿಗೆ ಗಂಭೀರ ಗಾಯ

ಸಿದ್ದಾಪುರ: ಸಮೀಪದ ಅಭ್ಯತ್ ಮಂಗಲದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ತೋಟಕ್ಕೆ ನುಗ್ಗಿರುವ ಘಟನೆ ನಡೆದಿದೆ. ತೋಟಕ್ಕೆ ನುಗ್ಗಿರುವ ಕಾರು ಸಿಲ್ವರ್ ಮರಕ್ಕೆ ಡಿಕ್ಕಿಯಾಗಿ ಸಂಪೂರ್ಣ ಹಾನಿಯಾಗಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

 ಕೆಲಸಕ್ಕೆ ತೆರಳಿ ಹಿಂತಿರುಗುವಾಗ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದವರನ್ನ ಚೆಟ್ಟಳ್ಳಿ ಸಮೀಪದ ಕಂಡಕರೆ ಗ್ರಾಮದವರು ಎಂದು ಗುರುತಿಸಲಾಗಿದೆ.ಗಂಭೀರ ಗಾಯಗೊಂಡವರನ್ನು ಸಿದ್ದಾಪುರ ಆಸ್ಪತ್ರೆಗೆ ರವಾನಿಸಲಾಗಿದ್ದು,ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಅಪ್ಡೇಟ್ ಮಾಡಲಾಗುವುದು.