ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಮಳೆ: ಮೆಕ್ಕೆಜೋಳದ ಕಾಳುಗಳು ಮೊಳಕೆ,ಅಪಾರ ಪ್ರಮಾಣದಲ್ಲಿ ಹಾನಿ
ಕುಶಾಲನಗರ : ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಯನ್ನು ಬೆಳೆದ ರೈತರ ಗೋಳು ಹೇಳತ್ತಿರಾದಾಗಿದೆ.
ಈಗಾಗಲೇ ಮೆಕ್ಕೆಜೋಳ ಕಟಾವುಗೆ ಬಂದು ಅನೇಕ ರೈತರು ಜಮೀನಿನಲ್ಲಿ ಕಾಟಾವು ಮಾಡಿ ಗುಡ್ಡೆ ಹಾಕಲಾಗಿ, ಕಳೆದ ವಾರ ಸ್ವಲ್ಪ ಬಿಸಿಲಿನ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಮಾತ್ತೆಯನ್ನು ಯಂತ್ರದ ಮೂಲಕ ಮೆಕ್ಕೆಜೋಳದ ಕಾಳುಗಳನ್ನಾಗಿ ಮಾಡಿ ಜಮೀನಿನ ಕಣದಲ್ಲಿ ಗುಡ್ಡೆ ಮಾಡಲಾಗಿತು.ಆದರೆ ಅಕಾಲಿಕ ಮಳೆಯಿಂದಾಗಿ ಆ ಜೋಳಕಾಳುಗಳು ಮೊಳಕೆಯಾಗಿ ಬರುತ್ತಿರುವುದು ಕಂಡುಬರುತ್ತಿದೆ.
ಮೆಕ್ಕೆಜೋಳವನ್ನು ಕಾಳುಗಳಾಗಿ ಪರಿವರ್ತನೆ ಮಾಡಿದ ನಂತರ ಒಣಗಿಸಿ ಮಾರಾಟ ಮಾಡುವುದು ಸಾಮಾನ್ಯ.ಆದರೆ, ಮೆಕ್ಕೆಜೋಳ ಮಳೆಯಿಂದಾಗಿ ಹಸಿ ಇರುವುದರಿಂದ ಖರೀದಿದಾರು ಸಹ ಬಾರದೆ ಇರುದರಿಂದಾಗಿ ಈ ಸಾಲಿನಲ್ಲಿ ಕಾಳುಗಳು ಸಹ ಮೊಳಕೆ ಬರುವತಂಹ ಪ್ರಸಂಗಗಳು ಎದುರಾಗಿವೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯ ಆಶ್ರಯದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಮೆಕ್ಕೆಜೋಳದ ಬೆಳೆಯನ್ನು ಬೆಳೆದು ಕಟಾವು ಹಂತಕ್ಕೆ ಬಂದು, ಅಕಾಲಿಕ ಮಳೆಯಿಂದಾಗಿ ಬೆಳೆಯು ಅನೇಕ ರೈತರ ಜಮೀನಿನಲ್ಲಿ ನೆಲಕ್ಕೆ ಬಿದ್ದಿವೆ.
ಇದರಿಂದಾಗಿ ತಾಲ್ಲೂಕು ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ ಕೂಡುಮಂಗಳೂರು ಅಳುವಾರ ಸಿದ್ದಲಿಂಗಪುರ, 6. ನೇ ಹೊಸಕೊಟೆ,ಗ್ರಾಮ ಪಂಚಾಯತಿ ವ್ಯಾಪ್ತಿಯ 50. ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ನೆಲಕ್ಕೆ ಬಿದ್ದು ಅದರ ಕಾಳುಗಳು ಮೊಳಕೆ ಬರುವಂತ ಪ್ರಸಂಗ ಎದುರಾಗಿದೆ. ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವಂತೆ ಈ ವ್ಯಾಪ್ತಿಯ ನೂರಾರು ರೈತರ ಆಗ್ರಹವಾಗಿದೆ.