ಏ.17ರಿಂದ 24ರವರೆಗೆ ಎಮ್ಮೆಮಾಡು ಮಖಾಂ ಉರೂಸ್

Apr 15, 2026 - 16:23
 0  46
ಏ.17ರಿಂದ  24ರವರೆಗೆ ಎಮ್ಮೆಮಾಡು ಮಖಾಂ ಉರೂಸ್

ಮಡಿಕೇರಿ: 400 ವರ್ಷಗಳ ಇಲಾತಿಹಾಸ ಹೊದಿರುವ ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮೀ ಹಾಗೂ ಇತರ ಔಲಿಯಾಕ್ಕಳ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಎಮ್ಮೆಮಾಡು ಮಖಾಂ ಉರೂಸ್ ಕಾರ್ಯಕ್ರಮ ಏ.17ರಿಂದ ಏ.24ರವರೆಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಕೆ.ಎಂ.ಹುಸೈನ್ ಸಖಾಫಿ ತಿಳಿಸಿದ್ದಾರೆ.

ಏ.17ರಂದು ಮಖಾಂ ಝಿಯಾರತ್ ಹಾಘೂ ಉರೂಸ್ ಉದ್ಘಾಟನೆಯನ್ನು ಸಯ್ಯಿದುಲ್ ಉಲಾಮ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನೆರವೇರಿಸಲಿದ್ದಾರೆ. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಕೆ.ಎಂ.ಹುಸೈನ್ ಸಖಾಫಿ ಧ್ವಜಾರೋಹಣ ಮಾಡಲಿದ್ದು, ಎಮ್ಮೆಮಾಡು ಖತೀಬರಾದ ಆಫಿಳ್ ಅಬ್ದುಲ್ ರಾಝಿಕ್ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಏ.18ರಂದು ದಿಕ್ರ್ ದುಆ ಮಜ್ಲಿಸ್, ಏ.19ರಂದು ಖತಮುಲ್ ಕುರ್ ಆನ್ ನಡೆಯಲಿದೆ. ಏ.20 ರಂದು ನಡೆಯುವ ಸಾರ್ವಜನಿಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಸಾಧ್ಯತೆಯಿದೆ ಎಂದು ತಿಳಿಸಿದ ಅವರು, ಅಂದು ಸಭಾಪತಿ ಯು.ಟಿ.ಖಾದರ್, ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹಮ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಮಂತರ್ ಗೌಡ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.

ಏ.20, 21ರಂದು ಧಾರ್ಮಿಕ ಪ್ರವಚನ, ಏ.22ರಂದು ದುಆ ಮಜ್ಲಿಸ್, ಏ.23ರಂದು ಸ್ವಲಾತ್ ಮಜ್ಲಿಸ್, ಏ.24ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಮಾಹಿನ್, ಅಬ್ದುಲ್ ರೆಹಮಾನ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0