ವಿರಾಜಪೇಟೆ:ಎಂಬಾರ್ಕ್ ಅಸೋಸಿಯೇಷನ್ ನಿಂದ ವಿದ್ಯಾರ್ಥಿಗಳಿಗೆ ನಿರರ್ಗಳವಾಗಿ ಕನ್ನಡ ಮಾತನಾಡುವ ಸ್ಪರ್ಧೆ
ವಿರಾಜಪೇಟೆ: ಕನ್ನಡ ಭಾಷೆಯನ್ನು ಉಚ್ಚರಿಸುವ ಸಂದರ್ಭದಲ್ಲಿ ವಿವಿಧ ಭಾಷೆಗಳ ಒತ್ತಡದಿಂದಾಗಿ ಭಾಷಾ ಪ್ರಯೋಗದಲ್ಲಿ ಸ್ಪಷ್ಟ ಕನ್ನಡ ಕಣ್ಮರೆಯಾಗುತ್ತಿದೆ ಎಂದು ಎಂಬಾರ್ಕ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.
ಎಂಬಾರ್ಕ್ ಅಸೋಸಿಯೇಷನ್ (ರಿ) ವಿರಾಜಪೇಟೆ ವತಿಯಿಂದ 70 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಪ್ರೌಢಶಾಲೆ ವಿರಾಜಪೇಟೆ, ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳ ಸ್ಪಷ್ಟ ಕನ್ನಡ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಅಬ್ದುಲ್ ಲತೀಫ್ ಅವರು, ಭಾಷೆಯನ್ನು ಧೀಮಂತಗೊಳಿಸಲು ಶಬ್ದ ಉಚ್ಚರಣೆ, ಅರ್ಥ, ಮತ್ತು ಗ್ರಹಿಸಿ ಮಾತನಾಡುವುದು ಮುಖ್ಯ. ಕನ್ನಡ ಭಾಷೆಗೆ ತನ್ನಾದೆಯಾದ ಸ್ಥಾನಮಾನಗಳಿವೆ. ಆಧುನಿಕ ಕನ್ನಡವು ಇಂದು ಹಲವು ಭಾಷೆಗಳ ಬೆರೆಕೆಯಿಂದಾಗಿ ತಾಯಿ ಭಾಷೆಯು ಕಲಬೆರೆಕೆಯ ಭಾಷೆಯಾಗಿ ಹೊರಹೊಮ್ಮಿದೆ. ಕಾರಣ ನಾವು ಬಳಸುವ ಕನ್ನಡ ಭಾಷೆಯಲ್ಲಿ ಇತರ ಭಾಷೆಗಳನ್ನು ಪ್ರಯೋಗಿಸುದಾಗಿದೆ. ಕನ್ನಡ ಭಾಷೆಯನ್ನು ಕನ್ನಡದ ರೀತಿಯಲ್ಲಿ ಬಳಸಿ ಮಾತನಾಡಿ.ಶಬ್ದಗಳನ್ನು ಅರ್ಥಗಳನ್ನು ಗ್ರಹಿಸಿ ಉಚ್ಚರಿಸಿ ಇದರಿಂದ ಭಾಷೆಯು ಧೀಮಂತವಾಗುತ್ತದೆ. ನವೆಂಬರ್ ತಿಂಗಳಿಗೆ ಮಾತ್ರ ಸಿಮಿತವಾಗದೆ ಕನ್ನಡ ಚಿರಾಯುವಾಗಿರುವಂತೆ ದಿನನಿತ್ಯ ಅಚ್ಚಕನ್ನಡದಲ್ಲಿ ಉಚ್ಚರಿಸಿ.ಇದು ನಾವು ಕನ್ನಡ ತಾಯಿಗೆ ನೀಡುವ ಕಾಣಿಕೆ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಚಾರ್ಲ್ಸ್ ಡಿಸೋಜಾ ಅವರು ಮಾತನಾಡಿ, ನಮ್ಮಲ್ಲಿ ನಾಡು ನುಡಿ ಸಂಸ್ಕೃತಿ ಜಾಗೃತವಾಗಬೇಕಾದರೆ ನಾವು ಮತ್ತೊಬ್ಬರೊಂದಿಗೆ ವ್ಯವಹರಿಸುವ ಸಂದರ್ಭ ಕನ್ನಡ ಭಾಷೆ ತಪ್ಪಿಲ್ಲದೆ ಇತರ ಭಾಷೆ ಬೆರೆಯುವುದನ್ನು ತಪ್ಪಿಸಿ, ಶಬ್ದ ಗ್ರಹಿಸಿ ಮಾತನಾಡಿದಲ್ಲಿ ಮಾತ್ರ. ಕನ್ನಡ ಭಾಷೆ ಜೀವಂತ ಎಂದು ಪರಿಗಣಿಸಬಹುದು. ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಪೂರೈಸಿದ ಯುವ ಸಮುದಾಯವು ದಿನ ಬಳಕೆಗಾಗಿ ಬೆರೆಕೆ ಕನ್ನಡದಲ್ಲಿ ವ್ಯವಹರಿಸುವುದು ಕಳವಳಕಾರಿ ಸಂಗತಿ. ಕನ್ನಡ ಉಸಿರು, ಕನ್ನಡ ಹಸಿರು ಎಂದು ಚಿಂತಿಸಿ ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪತ್ರಕರ್ತೆ ಉಷಾ ಪ್ರೀತಂ ಅವರು ಮಾತನಾಡಿ ಪ್ರಸ್ತುತ ಗ್ರಾಮೀಣ ಭಾಗದಿಂದ ರಾಜ್ಯದ ಕೇಂದ್ರ ಸ್ಥಾನದ ವರೆಗೂ ಜನಪದ ಸೊಗಡಿನ ಪ್ರಾಚೀನ ಪರಂಪರೆಯುಳ್ಳ ಆಡು ಕನ್ನಡ ಭಾಷೆ.ನಾನಾ ಭಾಷೆಗಳ ಒತ್ತಡ, ದಬ್ಬಾಳಿಕೆಯಿಂದ ಮೂಲಭಾಷೆಯ ಪ್ರಯೋಗ ನೆಲಕಚ್ಚಿದೆ. ಹಲವು ಜ್ಞಾನಪೀಠ ಪ್ರಶಸ್ತಿ, ಧೀಮಂತ ಸಾಹಿತ್ಯ, ಜನಪದ ಸಾಹಿತ್ಯ ಹೀಗೆ ಹಲವಾರು ಪರಿಣಾಮಕಾರಿ ವಿಷಯಗಳು ಕನ್ನಡ ಭಾಷೆ ನುಡಿ, ಸಂಸ್ಕೃತಿಗೆ ಬೃಹತ್ ಮಟ್ಟದಲ್ಲಿ ಕೊಡುಗೆ ನೀಡಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದಿ ಕೆಲಸ ಗಿಟ್ಟಿಸಿಕೊಂಡ ವ್ಯಕ್ತಿಗಳು ಕನ್ನಡ ಭಾಷೆಯನ್ನು ಮರೆತು ಮರೆತಂತಿರುವಂತೆ ನಟಿಸಿ ಇತರ ಭಾಷೆಗೆ ಮನ್ನಣೆ ನೀಡಿ ವ್ಯವಹರಿಸುತ್ತಿರುವುದು ಸೋಜಿಗ ವಿಷಯ. ಮಾತೃ ಭಾಷೆಯನ್ನು ಮರೆತು ಜೀವಿಸುವುದು ತಾಯಿಯನ್ನು ಮರೆತಂತೆ ಜ್ಞಾನದಿಂದ ಬಳಸಿ ಕನ್ನಡ ಸುಜ್ಞಾನದಿಂದ ಇತರರಿಗೆ ಭಾಷೆಯ ಸೊಗಡನ್ನು ಪಸರಿಸಿ ಎಂದು ಹೇಳಿದರು.
ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಮದನ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎಂಬಾರ್ಕ್ ಅಸೋಸಿಯೇಷನ್ ಸಂಸ್ಥೆಯ ಅದ್ಯಕ್ಷರಾದ ದಿವಾಕರ್ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳು ಬಾಲ್ಯ ಶಿಕ್ಷಣದಿಂದ ಕಾಲೇಜು ಶಿಕ್ಷಣದ ಪೂರೈಸಿ ಜೀವನ ಪ್ರಾರಂಭಿಸುವ ಕ್ಷಣದಲ್ಲಿ ಕನ್ನಡ ಬರೆಯಲು ತಿಳಿದಿಲ್ಲ.ವ್ಯವಹರಿಸಲು ತಿಳಿದಿಲ್ಲ. ಎಂದು ಪರಿತಪಿಸುತ್ತಿರುವುದು ಪ್ರಸ್ತುತ ಸಮಾಜದಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ಸಂಸ್ಥೆಯು ಶಾಲಾ ಮಟ್ಟದ ವಿಧ್ಯಾರ್ಥಿಗಳಿಗಾಗಿ ಚಿಕ್ಕವೀರ ರಾಜೇಂದ್ರ, ಕನ್ನಡ ಧ್ವಜ, ತಲಕಾವೇರಿ, ನಾಡಗೀತೆ ಕರ್ನಾಟಕ ಪ್ರಸಿದ್ದ ಸ್ಥಳಗಳು, ಸಾಲುಮರದ ತಿಮ್ಮಕ್ಕ, ಪರಿಸರ, ಜ// ಕಾರ್ಯಪ್ಪ, ನಾಡ ಹಬ್ಬ ದಸರಾ, ಡಾ.. ರಾಜ್ ಕುಮಾರ್ ಕೃಷ್ಣರಾಜಸಾಗರ ಅಣೆಕಟ್ಟು, ಗ್ರಾಮೀಣ ಕ್ರೀಡೆಗಳು ಮುಂತಾದ ವಿಷಯಾಧರಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದು ಪ್ರೌಢಶಾಲ ವಿಭಾಗದ 8ನೇ, 09 ನೇ ಮತ್ತು 10 ನೇ ತರಗತಿ ಮಟ್ಟದ ಸ್ಪರ್ಧೆಗಳನ್ನು ಅಯೋಸಿದ್ದೇವೆ. ಇದರಿಂದ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಕರ್ನಾಟಕದ ಜಾನಪದ ಕಲೆಗಳು ವಿಷಯದಲ್ಲಿ 10 ನೇ ತರಗತಿ ವಿಧ್ಯಾರ್ಥಿ ನಜೀರುದ್ದೀನ್ ಹೆಚ್. ಎಂ ಪ್ರಥಮ ಸ್ಥಾನ, ಜ. ತಿಮ್ಮಯ್ಯ ವಿಷಯದಲ್ಲಿ ಮೊಹಮ್ಮದ್ ಇಷಾಮ್ ಕೆ.ಎಸ್. (10 ನೆ ತರಗತಿ)
ದ್ವೀತಿಯ ಸ್ಥಾನ . ಡಾ. ರಾಜ್ ಕುಮಾರ್ ವಿಷಯದಲ್ಲಿ ಲಾವಣ್ಯ ಪಿ.ಟಿ. ತೃತೀಯ ಸ್ಥಾನ ಪಡೆದುಕೊಂಡರು. ಒಟ್ಟು ವಿವಿಧ ತರಗತಿಗಳ ಒಟ್ಟು 18 ವಿಧ್ಯಾರ್ಥಿಗಳು ಸ್ಪರ್ಧೇಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಪ್ರತಿಯೋಬ್ಬ ವಿಧ್ಯಾರ್ಥಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಎಂಬಾರ್ಕ್ ಅಸೋಸಿಯೇಷನ್ ವಿರಾಜಪೇಟೆ ಸಂಸ್ಥೆಯ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಸ್ವಾಗತಿಸಿ, ಬೊವಿರಂಡ ಶರಣು ಸುಬ್ರಮಣಿ ನಿರೂಪಿಸಿ ಸಜಿತ್ ವಂದಿಸಿದರು.ಎಂಬಾರ್ಕ್ ಅಸೋಸಿಯೇಷನ್ ವಿರಾಜಪೇಟೆ ಸಂಸ್ಥೆಯ ಎ.ಕೆ. ರವಿಶಂಕರ್, ಸುರೇಶ್, ಸಜೀತ್, ಮನ್ಸೂರ್, ಭರತ್ ಪೂಜಾರಿ, ಪಾಪಣ್ಣ ಆಚಾರ್, ಟಿ.ಜೆ.ಶಂಕರ್ ಶೆಟ್ಟಿ, ಸೇರಿದಂತೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಹಾಜರಿದ್ದರು.
ಕಿಶೋರ್ ಕುಮಾರ್ ಶೆಟ್ಟಿ